ಶಿರ್ವದ ಕಡಂಬುವಿನಲ್ಲಿ ರಾರಾಜಿಸುತ್ತಿದೆ ಕೆ ಕೆ ಫ್ರೆಂಡ್ಸ್ ರಚಿಸಿದ ಬೃಹತ್ ಗೂಡುದೀಪ
Thumbnail
ಶಿರ್ವ : ಕೆ ಕೆ ಫ್ರೆಂಡ್ಸ್ ಕಡಂಬು ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ಕಡಂಬು ಮೈದಾನದಲ್ಲಿ ಸೋಮವಾರ ಬೃಹತ್ ಗೂಡುದೀಪ ಅಳವಡಿಸಿ ದೀಪಾವಳಿ ಆಚರಿಸಲಾಯಿತು. ಸುಮಾರು 9 ಫೀಟ್ ಎತ್ತರ ಮತ್ತು 5 ಫೀಟ್ ಅಗಲದ ಗೂಡುದೀಪ ಜೊತೆಗೆ ವಿದ್ಯುತ್ ದೀಪದ ಮೆರುಗು ಕಡಂಬು ಮೈದಾನದಲ್ಲಿ ರಾರಾಜಿಸುತ್ತಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕೆ ಕೆ ಫ್ರೆಂಡ್ಸ್ ನ ಸದಸ್ಯರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
Additional image
25 Oct 2022, 08:59 PM
Category: Kaup
Tags: