ಕಾಪು : ಬಿಜೆಪಿ‌ ಒಬಿಸಿ ಮೋರ್ಚಾ ವತಿಯಿಂದ ವಾಹನ ಪೂಜಾ ಕಾರ್ಯಕ್ರಮ
Thumbnail
ಕಾಪು : ಹೊಸ ಮಾರಿಗುಡಿಯಲ್ಲಿ ಕಾಪು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ವಾಹನ ಪೂಜೆ ಕಾರ್ಯಕ್ರಮವನ್ನು ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಬುಧವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಬಿಜೆಪಿ ಪಕ್ಷದ ವತಿಯಿಂದ ವಿವಿದೆಡೆಯಲ್ಲಿ ವಾಹನ ಪೂಜಾ, ಗೋ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದೆ. ಸಮಾಜಮುಖಿ ಚಿಂತನೆಯುಳ್ಳ, ಹಿಂದೂ ಧಾರ್ಮಿಕ ಆಚರಣೆಗಳನ್ನು ಸಂಭ್ರಮದಿಂದ ಇನ್ನಷ್ಟು ಜನರಿಗೆ ತಲುಪಿಸುವ ಕಾರ್ಯ ಆಗುತ್ತಿದೆ. ನವೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಪುವಿಗೆ ಭೇಟಿ ನೀಡಲಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದರು. ಶ್ರೀಧರ ತಂತ್ರಿ ನೇತೃತ್ವದಲ್ಲಿ ವಾಹನಗಳಿಗೆ ಪೂಜಾ ಕೈಂಕರ್ಯ ನೆರವೇರಿತು. ಈ ಸಂದರ್ಭ ಯಶ್ಪಾಲ್ ಸುವರ್ಣ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಗೀತಾಂಜಲಿ ಸುವರ್ಣ, ಅನಿಲ್ ಕುಮಾರ್, ರತ್ನಾಕರ ಶೆಟ್ಟಿ, ಶಶಿಪ್ರಭ, ರವಿ ಉದ್ಯಾವರ, ಪ್ರವೀಣ್ ಪೂಜಾರಿ ಕಾಪು, ಸುಮ ಶೆಟ್ಟಿ, ಸರಿತಾ ಪೂಜಾರ್ತಿ, ಉಷ ಉದ್ಯಾವರ ಮತ್ತಿತರರು ಉಪಸ್ಥಿತರಿದ್ದರು.
Additional image Additional image
26 Oct 2022, 01:18 PM
Category: Kaup
Tags: