ಕಟಪಾಡಿ : ಈ ಬಾರಿ ಕಾಂತಾರ ಇಫೆಕ್ಟ್ ನಲ್ಲಿ ರಿಕ್ಷಾ ಚಾಲಕ ಜಯಕರ್
ಕಟಪಾಡಿ : ಆಟೋ ಚಾಲಕ ಜಯಕರ್ ಆಯುಧ ಪೂಜೆಯ ಪ್ರಯುಕ್ತ ರಿಕ್ಷಾಕ್ಕೆ ಕಾಂತಾರ ಸಿನಿಮಾ ಶೈಲಿಯಲ್ಲಿ ಸಿಂಗರಿಸಿ ತುಳುನಾಡಿನ ಕಂಬಳ ಮತ್ತು ಕಾಡು ಹಾಗು ಜನರ ನಡುವಿನ ಸಂಬಂಧದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಸುಮಾರು 17 ವರ್ಷಗಳಿಂದ ರಿಕ್ಷಾ ಚಾಲಕನಾಗಿ ದುಡಿದು ತನ್ನ ಜೀವನ ಸಾಗಿಸುತ್ತಿರುವ ಜಯಕರ್ ಹತ್ತು ವರ್ಷಗಳಿಂದ ತನ್ನ ಜೀವನ ಬಂಡಿ ಸಾಗಿಸುವ ರಿಕ್ಷಾಕ್ಕೆ ವಿವಿಧ ರೀತಿಯಲ್ಲಿ ಸಿಂಗರಿಸಿ ದೀಪಾವಳಿಯ ಸಂದರ್ಭ ರಿಕ್ಷಾ ಪೂಜೆಯನ್ನು ಮಾಡುತ್ತಾರೆ.
ಕೊರೋನಾ ಸಂದರ್ಭದಲ್ಲಿ ರಿಕ್ಷಾ ಬೆಲೂನ್ ಸಿಂಗರಿಸಿ ಕಟಪಾಡಿ ಪರಿಸರದಲ್ಲಿ ಓಡಾಟ ಮಾಡಿ ಮಕ್ಕಳ ಮನ ಗೆದ್ದಿದ್ದರು.
ಈ ಬಾರಿ ರಿಕ್ಷಾವನ್ನು ವಿವಿಧ ಹೂ ಮತ್ತು ಬಳ್ಳಿಗಳಿಂದ ಅಲಂಕರಿಸಿ ಪ್ರಕೃತಿ ಉಳಿಸುವ ಮಾಹಿತಿಯನ್ನು ಜನರಲ್ಲಿ ನೀಡುತ್ತಿದ್ದಾರೆ.
