ಕುಂದಾಪುರ : ಮೈ ಸುಟ್ಟುಕೊಂಡ ಎರಡು ವರ್ಷದ ಮಗು ಶ್ರಿಯಾಗೆ ನೆರವಾಗುವಿರಾ?
Thumbnail
ಮೊನ್ನೆ ದಿನ ಮನೆಯೊಳಗೆ ಆಟ ಆಡುತ್ತಿದ್ದ ಕೋಟ ಯಜ್ಙೇಶ ಆಚಾರ್ರ ಎರಡು ವರುಷದ ಮಗು ಶ್ರೀಯಾ ಆಡುತ್ತಾ ಆಡುತ್ತಾ ದೇವರ ಕೋಣೇಯೊಳಗೆ ಹೋಗಿದೆ.ಅಲ್ಲಿ ಉರಿಯುತ್ತಿದ್ದ ದೀಪ ಮಗುವಿನ ಬಟ್ಟೆಗೆ ತಾಗಿ ಬೆಂಕಿ ಹತ್ತಿಕೊಂಡಿದೆ, ಮಗು ಕಿರುಚಿಕೊಂಡು ಮನೆಯವರು ಓಡೋಡಿ ಬರುವುದರೊಳಗೆ ಮಗುವಿನ ದೇಹ ಭಾಗಶಃ ಸುಟ್ಟು ಹೋಗಿದೆ..ಕೂಡಲೆ ಕುಂದಾಪುರದ ನ್ಯೂ ಮೆಡಿಕಲ್ ಸೆಂಟರ್‌ಗೆ ಸೇರಿಸಲಾಯಿತಾದರೂ,ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ದಾಖಲಿಸಿ ಎಂದಿದ್ದಾರೆ ವೈದ್ಯರು.. ಅಲ್ಲಿಂದ ಮಣಿಪಾಲಕ್ಕೆ ಕೊಂಡೊಯ್ದು ಮಗು ಈಗ ತೀವೃ ನಿಗಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದೆ.. ಆ ಎರಡು ವರುಷದ ಹೆಣ್ಣು ಮಗು ಸುಟ್ಟ ಉರಿಯಲ್ಲಿ ಅದೇಷ್ಟು ಕಷ್ಟ ಅನುಭವಿಸುತ್ತಿದೆಯೋ ಏನೊ..? ಒಮ್ಮೊಮ್ಮೆ ದೇವರು ಯಾಕೆ ಅಷ್ಟೊಂದು ಕ್ರೂರಿ ಅನ್ನಿಸುತ್ತದೆ. ಬೆಳಿಗ್ಗೆ ಮಗುವಿನ ಸುಟ್ಟ ಮೈಯ ಪೋಟೊ ಕಂಡವನಿಗೆ ಭಾರೀ ಸಂಕಟವಾಗಿ ಬಿಟ್ಟಿತು.. ಮಕ್ಕಳೇನಾದರೂ ಸಣ್ಣ ಗಾಯ ಮಾಡಿಕೊಂಡರೆ ಹೆತ್ತ ಕರುಳಿಗೆ ಸಹಿಸುವುದೇ ಕಷ್ಟ ವಾಗುತ್ತದೆ, ಅದರಲ್ಲೂ ಎರಡು ವರುಷದ ಹಸುಳೆ ಕಂದಮ್ಮ ಮೈತುಂಬಾ ಸುಟ್ಟುಕೊಂಡು ಪಡಿಪಾಟಲು ಪಡುತ್ತಿರಬೇಕಾದರೆ ಆ ಹೆತ್ತ ಜೀವಗಳಿಗೆ ಹೇಗಾಗಬೇಡ ಹೇಳಿ?? ಈ ಮಗುವಿನ ತಂದೆ ಸ್ವಿಗ್ಗಿ ಕಂಪೆನಿಯಲ್ಲಿ ಸಣ್ಣದೊಂದು ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದವರಿಗೆ ಇದೀಗ ಏಕಾಏಕಿ ಮಣಿಪಾಲದ ಆಸ್ಪತ್ರೆಯ ಬಿಲ್ಲು ನೋಡಿ ದಿಕ್ಕೇ ತೋಚದಂತಾಗಿದೆ.. ಹಿಂದೊಮ್ಮೆ ನಾವೆಲ್ಲಾ ಇಂತಹುದೇ ಒಂದು ಮಾನವೀಯ ಅಂತಃಕರಣದ ಅಭಿಯಾನದಲ್ಲಿ ಜೊತೆಯಾದವರು.. ಇಂದು ಕೂಡ ಮಗು ಶ್ರೀಯಾಳ ಈ ಕಷ್ಟಕ್ಕೆ ನಾವೆಲ್ಲಾ ಕೈ ಜೋಡಿಸಬೇಕಿದೆ. ನೀವೆಲ್ಲಾ ಜೊತೆಯಾಗಲಿದ್ದಿರಿ ಎನ್ನುವ ತುಂಬು ನಂಬಿಕೆ ನಮ್ಮದು. ಇದು ಶ್ರೀಯಾಳ ತಂದೆ ಯಜ್ಙೇಶ್ ಆಚಾರ್ ಅಕೌಂಟ್ ಡಿಟೈಲ್ಸ್.. ಗೆಳೆಯರೇ ನಮ್ಮೀ ಜಗತ್ತಿನಲ್ಲಿ ಮಾನವೀಯತೆಯ ಒರತೆ ಎಂದೂ ಬತ್ತದೇ ಇರಲಿ ಅಲ್ವಾ? ಮಗುವಿನ ತಂದೆಯ ಅಕೌಂಟ್ ಡಿಟೈಲ್ಸ್. Yajnesh achar Ac.No 4152500101055101 Ifsc- KARB0000415 Branch - kumbhshi Google pay/ phone pay/paytm 7892770492 ಪ್ರವೀಣ್ ಯಕ್ಷಿಮಠ
18 Jun 2020, 09:32 PM
Category: Kaup
Tags: