ಡಿ.23 : ಮಡುಂಬು ಕುಂದರ್ ಕುಟುಂಬಸ್ಥರ ದೈವಗಳ ಹರಕೆಯ ನೇಮೋತ್ಸವ
ಕಾಪು : ಮಡುಂಬು ಕುಂದರ್ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ಶ್ರೀ ಧರ್ಮ ಜಾರಂದಾಯ ಬಂಟ ಮತ್ತು ಶ್ರೀ ವರ್ತೆ ಪಂಜುರ್ಲಿ ದೈವಗಳ ಹರಕೆಯ ನೇಮೋತ್ಸವವು ಡಿ.23, ಮಂಗಳವಾರ ಜರಗಲಿದೆ.
ಆ ಪ್ರಯುಕ್ತ ಸಂಜೆ 5.30ಕ್ಕೆ ಭಂಡಾರ ಇಳಿದು, ರಾತ್ರಿ ಗಂಟೆ 7.30ಕ್ಕೆ ಅನ್ನಸಂತರ್ಪಣೆ ಹಾಗೂ ರಾತ್ರಿ ಗಂಟೆ 9 ಕ್ಕೆ ದೈವಗಳ ನೇಮೋತ್ಸವವು ನಡೆಯಲಿರುವುದು.
ಸರ್ವರು ಸಕುಟುಂಬಿಕರಾಗಿ ಆಗಮಿಸಿ, ಸಿರಿ-ಮುಡಿ ಗಂಧ-ಪ್ರಸಾದ ಸ್ವೀಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮತಿ ಶ್ಯಾಮಲ ಕುಂದರ್ ಮತ್ತು ಮಕ್ಕಳು ಹಾಗೂ ಮೊಮ್ಮಕ್ಕಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
