ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿ (ರಿ.) ಇದರ 41ನೇ ವಾರ್ಷಿಕೋತ್ಸವ ಸಮಾರಂಭವು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಬಳಿ ನಡೆಯಿತು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಉದ್ಘಾಟಿಸಿ ಮಾತನಾಡಿ, ಲಭ್ಯ ಸದವಕಾಶವನ್ನು ಬಳಸಿಕೊಂಡು ಸಂಘಟಿತರಾಗಿ ಸಮಾಜಕ್ಕೆ ಆತ್ಮ ಸ್ಥೈರ್ಯ ನೀಡುವಂತಹ ಸಾಧನೆಯ ಮೂಲಕ ಜಿಲ್ಲಾ ರಾಜ್ಯೋತ್ಸವಕ್ಕೆ ಪಾತ್ರರಾಗಿದ್ದು, ಸುವರ್ಣ ಸಂಭ್ರಮದಲ್ಲಿ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ ಎಂದರು.ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಅಡಳಿತ ಮೊಕ್ತೇಸರರಾದ ಎರ್ಮಾಳು ಬೀಡು ಅಶೋಕ ರಾಜರು ಮಾತನಾಡಿ, ಊರಿಗೆ ಸ್ತ್ರೀಯರೇ ನಿಧಿಯಾಗಿರುವ ಮಹಿಳಾ ಮಂಡಳಿ ಶ್ರೀನಿಧಿ ಮಹಿಳಾ ಮಂಡಳಿಯಾಗಿದ್ದು, ಮತ್ತಷ್ಟು ಸಾಧನೆಗಳ ಮೂಲಕ ಆದ್ದೂರಿಯಾಗಿ ಸುವರ್ಣ ಸಂಭ್ರಮವನ್ನು ಆಚರಿಸುವಂತಾಗಲಿ ಎಂದರು.ಸಮಾರಂಭದಲ್ಲಿ ಸಾಧಕಿಯರಾದ ಆಂತಾರಾಷ್ಟ್ರೀಯ ಕ್ರೀಡಾಪಟು ಅಕ್ಷತಾ ಪ್ರಶಾಂತ್ ಪೂಜಾರಿ, ಗಿನ್ನೆಸ್ ದಾಖಲೆಯ ಸಾಧಕಿ ವಿದುಷಿ ದೀಕ್ಷಾ ರಾಹುಲ್ ಆವರನ್ನು ಸನ್ಮಾನಿಸಲಾಯಿತು. ಗೃಹ ನಿರ್ಮಾಣಕ್ಕೆ ಮತ್ತು ಅನಾಥಾಶ್ರಮಗಳಿಗೆ ಸುಮಾರು 1.25 ಲಕ್ಷ ರೂ.ಗೂ ಅಧಿಕ ಮೊತ್ತದ ಧನ ಸಹಾಯ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪರಿಸರದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.ಜಿ.ಪಂ. ಮಾಜಿ ಉಪಾಧ್ಯಕ್ಷೆ/ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಗೌರವಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಮುಂಬೈ ಕಸ್ಟಮ್ಸ್ ನಿವೃತ್ತ ಅಸಿಸ್ಟೆಂಟ್ ಕಮೀಷನರ್ ಎರ್ಮಾಳು ರೋಹಿತ್ ಹೆಗ್ಡೆ, ಪುಣೆ ಹೋಟೆಲ್ ಉದ್ಯಮಿ ಸೀತಾರಾಮ ಎಲ್ ಶೆಟ್ಟಿ ಪುಚ್ಚೊಟ್ಟುಬೀಡು, ಪುಣೆ ಉದ್ಯಮಿ ನಾರಾಯಣ ಶೆಟ್ಟಿ ನೈಮಾಡಿ, ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳು ಮಣಿಪಾಲ ಇದರ ಸಹಾಯಕ ಪ್ರಾಧ್ಯಾಪಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ, ನಿವೃತ್ತ ಉಪಾನ್ಯಾಸಕ ವೈ. ರಾಮಕೃಷ್ಣ ರಾವ್ ಎರ್ಮಾಳು, ಪಡುಬಿದ್ರಿ ನವಶಕ್ತಿ ಮಹಿಳಾ ಮಂಡಳಿ ಆಧ್ಯಕ್ಷೆ ಭಾರತಿ ಜಿ. ಶೆಟ್ಟಿ, ಬಹುಮಾನ ವಿತರಕರಾದ ನಿವೃತ್ತ ಮುಖ್ಯೋಪಾಧ್ಯಾಯಿನಿ ಲಲಿತ ಪ್ರಭಾಕರ್ ರಾವ್ ವೇದಿಕೆಯಲ್ಲಿದ್ದರು.
ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿ ಆಧ್ಯಕ್ಷೆ ರೇಖಾ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಅಮಣಿ ಕುಂದರ್ ವರದಿ ವಾಚಿಸಿದರು. ಉಪಾಧ್ಯಕ್ಷೆ ವಾಣಿಶ್ರೀ ಗಣೇಶ್, ಕಲಾವತಿ ದಯಾನಂದ್ ಸನ್ಮಾನಿತರನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಅಮೃತಕಲಾ ಶೆಟ್ಟಿ ಪ್ರತಿಭಾ ಪುರಸ್ಕೃತರನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಅಮೃತಕಲಾ ಶೆಟ್ಟಿ ಪ್ರತಿಭಾ ಪುರಸ್ಕೃತರನ್ನು ಪರಿಚಯಿಸಿದರು. ಕೋಶಾಧಿಕಾರಿ ವಿಮಲ ಕೆ. ಸಾಲ್ಯಾನ್ ವಂದಿಸಿದರು. ಮಾಜಿ ಅಧ್ಯಕ್ಷರಾದ ಜ್ಯೋತಿ ಶೆಟ್ಟಿ ನಿರೂಪಿಸಿದರು.ಬಳಿಕ ನೃತ್ಯ ವೈವಿಧ್ಯ, ಕಾಪು ರಂಗತರಂಗ ತಂಡದ ಶೋಬಾಜಿ ತುಳು ನಾಟಕ ಪ್ರದರ್ಶನಗೊಂಡಿತು
