ಪಡುಬಿದ್ರಿ : ಕಂಚಿನಡ್ಕದಲ್ಲಿ ಪ್ರಥಮ ಬಾರಿಗೆ ಸಾಮೂಹಿಕ ಗೋಪೂಜೆ ; ಗೌರವಾರ್ಪಣೆ
Thumbnail
ಪಡುಬಿದ್ರಿ : ದೀಪಾವಳಿಯ ಪ್ರಯುಕ್ತ ಕಂಚಿನಡ್ಕದ ಹಿಂದೂ ಬಾಂಧವರ ನೇತೃತ್ವದಲ್ಲಿ ಸಾಮೂಹಿಕ ಗೋಪೂಜೆ, ಗೋಸಾಕುವ ಕುಟುಂಬಕ್ಕೆ ಗೌರವಾರ್ಪಣೆ ಕಾರ್ಯಕ್ರಮ ಬುಧವಾರ ನಡೆಯಿತು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಭಾರತಮಾತೆಗೆ ಪೂಜೆ ನಡೆಸಿ ಚಾಲನೆ ನೀಡಿದರು. ಮಾತೆಯರಿಂದ ಗೋಪೂಜೆ ನಡೆಸಿ, ಗೋಸಾಕುವ ಕುಟುಂಬಕ್ಕೆ ಗೌರವಪೂರ್ವಕವಾಗಿ ಸನ್ಮಾನಿಸಿ, ಗೋ ಆಹಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್.ಆರ್.ಹೆಗ್ಡೆ, ಕಾಪು ಮಂಡಲ ವಿಹಿಂಪ ಮುಖಂಡರಾದ ರಾಜೇಂದ್ರ ಶೆಣೈ, ಹಿಂದು ಜಾಗರಣಾ ವೇದಿಕೆ ಮುಖಂಡ ಪ್ರತೀಕ್ ಕೋಟ್ಯಾನ್, ಹಿಂದೂ ಮುಖಂಡರಾದ ಸಂದೇಶ್ ಶೆಟ್ಟಿ, ಸುಹಾಸ್ ಶೆಟ್ಟಿ, ಲೊಕೇಶ್ ಪಲಿಮಾರು, ಮೋಹನ್ ಪಣಿಯೂರು, ಸುಬ್ಬ ಕಂಚಿನಡ್ಕ, ಮೊನಪ್ಪ, ಸುಂದರ್, ಸುಗುಣಾ, ಶಾಂತ, ಚಿಕ್ಕ್ಯಕ್ಕ ಮೊದಲಾದವರು ಉಪಸ್ಥಿತರಿದ್ದರು.
Additional image Additional image Additional image
26 Oct 2022, 09:28 PM
Category: Kaup
Tags: