ಪಡುಬಿದ್ರಿ : ರೋಟರಿ ಕ್ಲಬ್ ಹಾಗೂ ಆರ್ ಸಿ ಸಿ ಜಂಟಿ ಆಶ್ರಯದಲ್ಲಿ ಭಜನಾ ಸ್ಪರ್ಧೆ -2022ಕ್ಕೆ ಚಾಲನೆ
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಹಾಗೂ ರೋಟರಿ ಸಮುದಾಯದಳ ಪಡುಬಿದ್ರಿ ಜಂಟಿ ಆಶ್ರಯದಲ್ಲಿ ರವಿವಾರ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ 6ನೇ ಬಾರಿಗೆ ಆಯೋಜಿಸಿದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ -2022 ನ್ನು ರೋಟರಿ ವಲಯ 5 ರ ಸಹಾಯಕ ಗವರ್ನರ್ ರೊ. ಡಾ.ಶಶಿಕಾಂತ್ ಕಾರಿಂಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ದೇವಳ, ಮಸೀದಿ, ಚಚ್೯ ಆರಾಧನಾ ಕೇಂದ್ರದಲ್ಲಿ ವಿವಿಧ ಆರಾಧನಾ ಕ್ರಮದ ಮೂಲಕ ದೇವರನ್ನು ಪ್ರಾರ್ಥಿಸುತ್ತೇವೆ. ಸಮಾಜದ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ. ದೇವರನ್ನು ಮುಟ್ಟಲು ಇರುವ ಮಾಧ್ಯಮವೇ ಭಜನೆ. ನಮ್ಮಲ್ಲಿ ಧನಾತ್ಮಕ ಶಕ್ತಿ ಮೂಡಲು ಭಜನೆಯಿಂದ ಸಾಧ್ಯ ಎಂದರು.
ಪಡುಬಿದ್ರಿ ಬೀಡಿನ ಬಲ್ಲಾಳರಾದ ರತ್ನಾಕರ್ ರಾಜ್ ಮಾತನಾಡಿ ಭಜನೆ ವಿಶೇಷವಾಗಿದೆ. ಈಗಿನ ಪರಿಸ್ಥಿತಯಲ್ಲಿ ನಮ್ಮ ಮನಸ್ಸಿನ ಒಳಿತಿಗಾಗಿ ಭಜನೆ ಅನಿವಾರ್ಯ. ಹಿಂದಿನ ಕಾಲದಲ್ಲಿ ಪ್ರತಿ ಮನೆ ಮನೆಗೂ ವರ್ಷಕ್ಕೆ ಒಂದು ಬಾರಿಯಾದರೂ ಭಜನಾ ಮಂಡಳಿಗಳು ಭಜನಾ ಸೇವೆಯ ಮೂಲಕ ಬರುತ್ತಿತ್ತು. ರೋಟರಿ ಪಡುಬಿದ್ರಿಯ ಕಾರ್ಯ ಶ್ಲಾಘನೀಯ ಎಂದರು.
ಪಡುಬಿದ್ರಿ ರೋಟರಿ ಅಧ್ಯಕ್ಷರಾದ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನವೀನ್ ಚಂದ್ರ ಸುವರ್ಣ ಅಡ್ವೆ, ವೈ. ಸುಕುಮಾರ್, ಗಣೇಶ್ ಆಚಾರ್ಯ ಉಚ್ಚಿಲ, ಪಿ ಕೃಷ್ಣ ಬಂಗೇರ, ರಮೇಶ್ ಯು., ಸಚ್ಚಿದಾನಂದ ವಿ. ನಾಯಕ್, ನಟರಾಜ್ ಪಿ.ಎಸ್, ಬಾಬು ಕೋಟ್ಯಾನ್,ಜ್ಯೋತಿ ಮೆನನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭ ಕಾರ್ಯಕ್ರಮ ನಿರ್ದೇಶಕರಾದ ಯಶೋದ ಪಡುಬಿದ್ರಿ, ಪುಷ್ಪಲತಾ ಗಂಗಾಧರ್, ರಕ್ಷಿತಾ ಉಡುಪ, ಹೇಮಲತಾ ಸುವರ್ಣ, ಸುನಿಲ್ ಕುಮಾರ್, ಪವನ್ ಸಾಲ್ಯಾನ್ ಹಾಗೂ ರೋಟರಿ ಸದಸ್ಯರಾದ ಸುಧಾಕರ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ ರೋಟರಿ ಸಮುದಾಯ ಅಧ್ಯಕ್ಷೆ ದೀಪಾಶ್ರೀ ಕರ್ಕೇರ ಸ್ವಾಗತಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ತನಿಷಾ ಜಿ ಕುಕ್ಯಾನ್ ವಂದಿಸಿದರು.
