ಮೂಳೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಪಿಲಿಕೋಲ ದೈವನರ್ತಕ ಗುಡ್ಡ ಪಾಣಾರರಿಗೆ ಹುಟ್ಟೂರ ಸನ್ಮಾನ ; ಮೂಳೂರ್ದ ಮುತ್ತು ಬಿರುದು
ಮೂಳೂರು : ಪ್ರಶಸ್ತಿಯನ್ನು ಬೆನ್ನಟ್ಟಿ ಹೋಗುವ ಒಂದು ಕಾಲ ಇತ್ತು. ಆದರೆ ಇಂದು ಪ್ರಶಸ್ತಿ ಯೋಗ್ಯ ವ್ಯಕ್ತಿಯನ್ನು ಅರಸಿ ಬಂದಂತಹ ಸಂದರ್ಭ ಯೋಚಿಸಿದರೆ ಯೋಗ್ಯವಾದವರೇ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ಅಭಿಪ್ರಾಯಪಟ್ಟರು.
ಅವರು 2022ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಪಿಲಿಕೋಲ ದೈವನರ್ತಕ ಗುಡ್ಡ ಪಾಣಾರ ಮೂಳೂರು ಇವರ ಹುಟ್ಟೂರ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಾರ್ಯವನ್ನು ಬಿಕ್ರಿಗುತ್ತು ಸುಂದರ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಸರ್ವೇಶ್ವರ ಫ್ರೆಂಡ್ಸ್ ವತಿಯಿಂದ ಜರಗಿದ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಗುಡ್ಡ ಪಾಣಾರ ಇವರನ್ನು ಶಾಲು, ಪೇಟ ತೊಡಿಸಿ ಸನ್ಮಾನ ಪತ್ರ ನೀಡುವ ಮೂಲಕ "ಮೂಳೂರ್ದ ಮುತ್ತು" ಎಂಬ ಬಿರುದು ನೀಡಿ ಸನ್ಮಾನಿಸಿದರು.
ಈ ಸಂದರ್ಭ ಮಹಾಲಕ್ಷ್ಮಿ ಕೋ ಒಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಡಾ.ವೈ.ಎನ್.ಶೆಟ್ಟಿ, ಮೂಳೂರು ಬಿಲ್ಲವ ಸಂಘದ ಉಪಾಧ್ಯಕ್ಷ ಪ್ರಕಾಶ್ ಮೂಳೂರು, ಮಟ್ಟಾರ್ ರತ್ನಾಕರ್ ಹೆಗ್ಡೆ, ಸೇಸು ಮಾಸ್ಟರ್, ಪಾಂಡುರಂಗ ಎಸ್.ಪಡ್ಡಮೆ, ಸಂತೋಷ್, ವೀರ ಕೇಸರಿ ಶೆಟ್ಟಿ, ಕೊರಗ ಬಂಗೇರ, ಸತೀಶ್ ಚಂದ್ರ ಮುಂತಾದವರು ಉಪಸ್ಥಿತರಿದ್ದರು.
ಪುರುಷೋತ್ತಮ್ ಮೂಳೂರು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.
