ಅದಮಾರು : ಪಿಪಿಸಿ ವಿದ್ಯಾಸಂಸ್ಥೆಯಿಂದ ಮತದಾರ ಜಾಗೃತಿ ಜಾಥ
Thumbnail
ಅದಮಾರು: ಇಲ್ಲಿನ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಬುಧವಾರ ಮತದಾರರ ಜಾಗೃತಿ ಜಾಥ ಕಾರ್ಯಕ್ರಮ ಜರಗಿತು. ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ಶಿಕ್ಷಕರ ಸಹಿತ ಎಲ್ಲಾ ವಿದ್ಯಾರ್ಥಿಗಳು ಅದಮಾರು ಮದರಂಗಡಿ ರಸ್ತೆಯಿಂದ ಆದರ್ಶ ಯುವಕ ಮಂಡಲದವರೆಗೆ ಸಾಗಿ, ಅಲ್ಲಿಂದ ವಾಪಸಾಗಿ ಪಿಪಿಸಿ ವಿದ್ಯಾ ಸಂಸ್ಥೆಯಲ್ಲಿ ಜಾಥ ಸಮಾಪ್ತಿಗೊಳಿಸಿದರು. ಈ ಸಂದರ್ಭ ಶಾಲೆಯ ಕನ್ನಡ ವಿಭಾಗದ ಉಪನ್ಯಾಸಕ ಜಯಶಂಕರ್ ಕಂಗಣ್ಣಾರುರವರು ಸಮರ್ಪಕ ಮಾಹಿತಿ ನೀಡಿದರು. ಈ ಸಂದರ್ಭ ಪ್ರಭಾರ ಪ್ರಾಂಶುಪಾಲ ಸಂಜೀವ ನಾಯಕ್, ನಿಕಟ ಪೂರ್ವ ಪ್ರಾಂಶುಪಾಲ ರಾಮಕೃಷ್ಣ ಪೈ, ಮತದಾರ ಸುರಕ್ಷತಾ ಸಂಘದ ಸಂಚಾಲಕಿ ನವ್ಯ ಬಿ ಎಸ್, ವಿಜಯೇಂದ್ರ ಕುಮಾರ್, ಆದರ್ಶ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಜೆ ಶೆಟ್ಟಿ ಬರ್ಪಾಣಿ, ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗದ ಶಿಕ್ಷಕರು ಮತ್ತು ಶಿಕ್ಷಕಿಯರು, 500ಕ್ಕೂ ಅಧಿಕ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
09 Nov 2022, 04:42 PM
Category: Kaup
Tags: