ಕಾರ್ಕಳ : ಕಾನೂನು ಅರಿವು ಮತ್ತು ನಮಗೂ ಹಕ್ಕಿದೆ @75 ಕಾರ್ಯಕ್ರಮ
Thumbnail
ಕಾರ್ಕಳ : ನಮ್ಮ ದೇಶದ ಕಾನೂನು ಅತ್ಯಂತ ಪರಿಣಾಮಕಾರಿಯಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ನ್ಯಾಯದ ಹಕ್ಕನ್ನು ನೀಡಿದೆ. ಕಾನೂನಿನ ಅಡಿಯಲ್ಲಿ ಪ್ರತಿ ನಾಗರೀಕನೂ ಕಾನೂನಿಗೆ ತಲೆಬಾಗಿ ತನ್ನ ಸ್ವಾತಂತ್ರವನ್ನು ಅನುಭವಿಸಬೇಕು. ನಮ್ಮ ಹಕ್ಕುಗಳಿಗಾಗಿ ಹೋರಾಡಿ ನ್ಯಾಯಾಲಯದಲ್ಲಿ ನ್ಯಾಯ ಪಡೆಯುವ ವ್ಯವಸ್ಥೆಯೂ ಇದೆ. ಇದನ್ನು ದೇಶದ ನಾಗರೀಕರಾದ ನಾವೆಲ್ಲ ಅರ್ಥೈಸಿಕೊಂಡು ಕಾನೂನಿಗೆ ಗೌರವ ನೀಡಿ ಬದುಕಬೇಕಿದೆ ಎಂದು ವಕೀಲ ಪ್ರಸನ್ನ ಕರ್ಮರ್ಕರ್‌ ಹೇಳಿದರು. ಅವರು ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ನಮಗೂ ಹಕ್ಕಿದೆ @ 75 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ನಾವೆಲ್ಲ ಕಾನೂನು ಮತ್ತು ಸಂವಿಧಾನದ ಆಶಯವನ್ನು ಗೌರವಿಸೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಅಶ್ವಥ್‌ ಎಸ್.ಎಲ್‌, ಗಣಪತಿ ಕೆ.ಎಸ್‌, ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಶಾನ್‌ ಗೌಡ, ಉಪನ್ಯಾಸಕರಾದ ರಾಘವೇಂದ್ರ ರಾವ್‌, ಉಮೇಶ್‌, ಅಕ್ಷತಾ ಜೈನ್‌, ಚಂದ್ರಕಾಂತ್‌ ಉಪಸ್ಥಿತರಿದ್ದರು. ಉಮೇಶ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
09 Nov 2022, 05:21 PM
Category: Kaup
Tags: