ಕಾಪು : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ ; 30 ವರ್ಷದ ಸಂಭ್ರಮ ; ಹೊಸ ಕಟ್ಟಡದ ಶಿಲಾನ್ಯಾಸ
Thumbnail
ಕಾಪು : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2022-23 ಸಾಲಿನ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಕಾಲೇಜಿನ 30 ವರ್ಷದ ಸಂಭ್ರಮ ಹಾಗು ಹೊಸ ಕಟ್ಟಡದ ಶಿಲಾನ್ಯಾಸ ಸೋಮವಾರ ನಡೆಯಿತು. ವಿದ್ಯಾರ್ಥಿ ಸಂಘದ ನೂತನ ನಾಯಕನಾಗಿ ಗೌರವ್ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದನು. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ತುಳು ಚಿತ್ರರಂಗದ ನವರಸ ನಟ ಭೊಜರಾಜ್ ವಾಮಂಜೂರು, ಕಾಲೇಜಿನ ಪ್ರಾಂಶುಪಾಲರಾದ ಸ್ಟೀವನ್ ಕ್ವಾಡ್ರಸ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರೊಷನಿ ಯಶ್ವಂತ್, ಮತ್ತು ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Additional image Additional image
22 Nov 2022, 10:39 AM
Category: Kaup
Tags: