ಕ್ರಿಕೆಟ್ : ಕಟಪಾಡಿಯ ರಿತೇಶ್ ಹೆಚ್ ಸುವರ್ಣ ರಾಜ್ಯಮಟ್ಟಕ್ಕೆ ಆಯ್ಕೆ
Thumbnail
ಕಟಪಾಡಿ : ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸಹಯೋಗದಲ್ಲಿ ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನವೆಂಬರ್ 16 ಮತ್ತು 17 ರಂದು ಹಾಸನ ಜಿಲ್ಲೆಯ ತಾಲೂಕು ಕ್ರೀಡಾಂಗಣ ಚನ್ನರಾಯಪಟ್ಟಣದಲ್ಲಿ ನಡೆಯಿತು. ಸೈಂಟ್ ಜಾನ್ಸ್ ಅಕಾಡೆಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಂಕರಪುರದ ವಿದ್ಯಾರ್ಥಿ ಕಟಪಾಡಿ ಅಂಬಾಡಿ ಹರೀಶ್ ದಯಾವತಿಯವರ ಪುತ್ರ ರಿತೇಶ್ ಹೆಚ್ ಸುವರ್ಣ ಉಡುಪಿ ಜಿಲ್ಲೆಯ ಕ್ರಿಕೆಟ್ ತಂಡದಲ್ಲಿ ಆಡಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಕಟಪಾಡಿಯ ಕ್ರಿಕೆಟ್ ಕೋಚ್ ಉದಯ್ ಹಾಗೂ ಪ್ರದೀಪ್ ಅವರಲ್ಲಿ ತರಬೇತಿ ಪಡೆದಿರುತ್ತಾನೆ.
24 Nov 2022, 11:12 PM
Category: Kaup
Tags: