ಕಾಪು : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರಾಮಚಂದ್ರ ಆಚಾರ್ಯರಿಗೆ ಪತ್ರಕರ್ತರ ಅಭಿನಂದನೆ
ಕಾಪು : ಇತ್ತೀಚೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯರವರನ್ನು ದಂಪತಿ ಸಮೇತವಾಗಿ ಕಾಪು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ನಮ್ಮೂರ ಮಂದಾರ ಹೋಟೆಲ್ ಸಭಾಭವನದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ರಾಮಚಂದ್ರ ಆಚಾರ್ಯ ಮಾತನಾಡಿ, ಪತ್ರಕರ್ತರು ಯಾವುದೇ ಪೂರ್ವಗ್ರಹ, ರಾಗದ್ವೇಷ ಇಲ್ಲದೆ ವಸ್ತು ನಿಷ್ಠ ವರದಿ ಮಾಡಬೇಕು. ಜನರಿಗೆ ಆ ಸುದ್ದಿಯಿಂದ ಲಾಭ ಆಗುವಂತಿರಬೇಕು. ಆಗ ಸಮಾಜಕ್ಕೆ ಮತ್ತು ಸುದ್ದಿ ಮಾಡಿದ ಪತ್ರಕರ್ತರಿಗೂ ಒಳಿತು ಎಂದರು.
ವೇದಿಕೆಯಲ್ಲಿ ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳು, ಕಾರ್ಯದರ್ಶಿ ಪುಂಡಲಿಕ ಮರಾಠೆ, ಕೋಶಾಧಿಕಾರಿ ಅಬ್ದುಲ್ ಹಮೀದ್ ಪಡುಬಿದ್ರಿ, ನಮ್ಮೂರ ಮಂದಾರ ಹೋಟೆಲ್ ಮಾಲೀಕ ವಾದಿರಾಜ ನಡಿಮನೆ, ರಾಮಚಂದ್ರ ಆಚಾರ್ಯರವರ ಪತ್ನಿ ರಾಜಲಕ್ಷ್ಮಿ ಆಚಾರ್ಯ ಜಿಲ್ಲಾ ಸಮಿತಿಯ ಸದಸ್ಯರು ಹಾಗೂ ಪತ್ರಕರ್ತರ ಉಪಸ್ಥಿತರಿದ್ದರು.
ಪತ್ರಕರ್ತ ಸುರೇಶ್ ಎರ್ಮಾಳು ಸ್ವಾಗತಿಸಿದರು. ರಾಕೇಶ್ ಕುಂಜೂರು ನಿರೂಪಿಸಿದರು. ಪುಂಡಲಿಕ ಮರಾಠೆ ವಂದಿಸಿದರು.
