ಮಸ್ಕತ್ ನ ಪ್ರತಿಷ್ಠಿತ ಮಲ್ಟಿ ಟೇಕ್ ಮಾಲಕರಿಂದ ಕಾಪು ಹೊಸ ಮಾರಿಗುಡಿ ದೇವಳಕ್ಕೆ 500 ಶಿಲಾಸೇವೆ ಸಮರ್ಪಣೆ
ಕಾಪು : ಮಸ್ಕತ್ ಮಲ್ಟಿ ಟೆಕ್ ಮಾಲಕರಾದ ದಿವಾಕರ್ ಶೆಟ್ಟಿ "ನರ್ಸಿ ಸದನ" ಮಲ್ಲಾರ್ ಇವರು ದಂಪತಿ ಸಮೇತರಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 500 ಶಿಲಾಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಣೆ ಮಾಡಿ ಮಾರಿಯಮ್ಮನ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾದರು.
ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ, ಜೀರ್ಣೋದ್ಧಾರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಸುಧಾಕರ್ ಶೆಟ್ಟಿ ಮಕರ ಕನ್ಸ್ಟ್ರಕ್ಷನ್, ಆರ್ಥಿಕ ಸಮಿತಿಯ ಕಾತ್ಯಾಯಿನಿ ತಂಡದ ಸಂಚಾಲಕರಾದ ಜಯಲಕ್ಷ್ಮಿ ಶೆಟ್ಟಿ, ದೇವಳದ ಸಿಬ್ಬಂದಿಗಳಾದ ಗೋವರ್ಧನ್ ಸೇರಿಗಾರ್, ಲಕ್ಷ್ಮಣ್ ಶೆಟ್ಟಿ ಮಂಡೇಡಿ ಮತ್ತು ಸಂತೋಷ್ ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.
