ಮಹಮ್ಮದನ್ ಯುವಕರ ತಂಡದಿಂದ ನಡ್ಸಾಲುವಿನಲ್ಲಿ ತಾತ್ಕಾಲಿಕ ರಸ್ತೆ ದುರಸ್ತಿ
Thumbnail
ನಡ್ಸಾಲು.05, ಜುಲೈ : ದೀನ್ ಸ್ಟ್ರೀಟ್ ಪ್ರವೇಶಿಸುವ ರಸ್ತೆ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ರಸ್ತೆ ತುಂಬಾ ನೀರು ನಿಂತು ಜನರು ನಡೆದುಕೊಂಡು ಹೋಗಲು ಮತ್ತು ವಾಹನದಲ್ಲಿ ಹೋಗಲು ತುಂಬಾ ಕಷ್ಟಕರವಾಗುತ್ತಿತ್ತು. ಎಷ್ಟು ಬಾರಿ ಪಂಚಾಯಿತಿಗೆ ತಿಳಿಸಿದರು ಕೂಡ ಪ್ರಯೋಜನವಾಗಲಿಲ್ಲ ಇದನ್ನು ಸ್ಥಳೀಯ ಮಹಮ್ಮದನ್ ಯುವಕರು ತಂಡ ಸೇರಿ ತಾತ್ಕಾಲಿಕವಾಗಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಇದನ್ನು ಆದಷ್ಟು ಬೇಗ ಸರಿಪಡಿಸಿ ಕೊಡಬೇಕಾಗಿ ತಮ್ಮಲ್ಲಿ MOHAMMADAN HELPING HAND ವಿನಂತಿಸಿಕೊಳ್ಳುತ್ತಿದ್ದಾರೆ
05 Jul 2020, 04:03 PM
Category: Kaup
Tags: