ಈ ಬಯೋಟೋರಿಯಂ ಕಂಪನಿ : ಆರೋಗ್ಯ ಮಾಹಿತಿ ಶಿಬಿರ ; ಸಾಧಕರ ಸನ್ಮಾನ
Thumbnail
ಶಿರ್ವ : ಈ ಬಯೋಟೋರಿಯಂ ಕಂಪನಿಯ ಆರೋಗ್ಯ ಮಾಹಿತಿ ಶಿಬಿರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಶಾಮ್ಸ್ ಸ್ವೇರ್ ಜಾಸ್ಮಿನ್ ಮಿನಿ ಹಾಲ್ ನಲ್ಲಿ ನಡೆಯಿತು. ಶಿರ್ವ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿರುವ ವಿಠಲ್ ಬಿ ಅಂಚನ್ ಹಾಗೂ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾಗಿರುವ ವಿಷ್ಣುಮೂರ್ತಿ ಸರಳಾಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು. ಆರೋಗ್ಯದ ಮಾಹಿತಿಯನ್ನು ಸಂತೋಷ್ ಶೆಟ್ಟಿ ಮೂಡಬಿದ್ರೆ ನೆರವೇರಿಸಿದರು. ಕಂಪನಿಯ ಸಿಬ್ಬಂದಿ ಸುಧಾಕರ ಆಚಾರ್ಯ ಕುತ್ಯಾರು ಇವರಿಗೆ ವೈದ್ಯಕೀಯ ನೆರವು ರೂ. 25,500 ನೀಡಲಾಯಿತು. ಗಿರೀಶ್ ನಾಯಕ್ ಅಲೆವೂರು, ಪ್ರಶಾಂತ್ ಆಚಾರ್ಯ ಶಿರ್ವ, ನವೀನ್ ಪೂಜಾರಿ ಬ್ರಹ್ಮಾವರ, ತ್ರಿಶೂಲ್ ಆಚಾರ್ಯ ಉಡುಪಿ, ಸಂತೋಷ ಶೆಟ್ಟಿ ಮೂಡಬಿದ್ರೆ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತಿಯಿದ್ದರು. ಮಲ್ಲಿಕಾ ಆಚಾರ್ಯ ಕಿನ್ನಿಗೊಳಿ ಸ್ವಾಗತಿಸಿ, ವಂದಿಸಿದರು.
14 May 2025, 05:45 PM
Category: Kaup
Tags: