ಕಾಪು : ಯುವಕಾಂಗ್ರೆಸ್ ವತಿಯಿಂದ ವನಮಹೋತ್ಸವ
Thumbnail
ಕಾಪು : ವಿಧಾನಸಭಾಕ್ಷೇತ್ರದ ಯುವಕಾಂಗ್ರೆಸ್ ಸಮಿತಿಯ ವತಿಯಿಂದ ವನಮಹೋತ್ಸವವು‌ ಕಾಪು ರಾಜೀವ್ ಭವನ ಮುಂಭಾಗ ಹಾಗೂ ಹಿರಿಯಡ್ಕಗಳಲ್ಲಿ ನಡೆಯಿತು. ಕಾಪು ವಿಧಾನಸಭಾಕ್ಷೇತ್ರ ದ ಯುವಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ‌ನಿಯಾಜ್ ರವರ ನೇತೃತ್ವದಲ್ಲಿ ಗಿಡ ನೆಡುವ ಹಾಗೂ ಗಿಡ ವಿತರಣೆ ಕಾರ್ಯಕ್ರಮವು ಜರಗಿತು. ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ದಕ್ಷಿಣ ಅಧ್ಯಕ್ಷರಾದ ವೈ ಸುಕುಮಾರ್, ಯುವ ಕಾಂಗ್ರೆಸ್ ಉಡುಪಿ ಜಿಲ್ಲಾ ಮಾಜಿ ಉಪಾಧ್ಯಕ್ಷರಾದ ಸುನೀಲ್ ಡಿ ಬಂಗೇರ, ಯುವಕಾಂಗ್ರೆಸ್ ಅಧ್ಯಕ್ಷರಾದ ಶರತ್ ನಾಯ್ಕ್, ಉತ್ತರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಕಾರ್ತಿಕ್, ಕಾಪು ಯುವ ಕಾಂಗ್ರೆಸ್ ಉತ್ತರ ಮಾಜಿ ಅಧ್ಯಕ್ಷರಾದ ನವೀನ್ ಸಾಲ್ಯಾನ್, ಕಾಪು ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಆಚಾರ್ಯ, ಯುವ ಕಾಂಗ್ರೆಸ್ ಮುಖಂಡರುಗಳಾದ ಲಿತೇಶ್, ಸನವರ್ ಶೇಕ್, ಅರ್ಫಾಜ್ ಎಂ ಎಸ್, ಕೀರ್ತಿ ಕುಮಾರ್, ಅಶ್ವತ್ ಆಚಾರ್ಯ, ರಿಯಾಮ್, ಸಫೀಕ್, ರಂಜಿತಾ, ರೇಶ್ಮಾ, ಹರ್ಷ ಕಾಮತ್, ಹಕೀಮ್, ರತನ್ ಕುಮಾರ್, ಉಡುಪಿ ಬ್ಲಾಕ್ ಯುವಕಾಂಗ್ರೆಸ್ ನ ಅಧ್ಯಕ್ಷರಾದ ಸಜ್ಜನ್ ಶೆಟ್ಟಿ, ಉಪಾಧ್ಯಕ್ಷರಾದ ಶ್ರೇಯಾ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುವೀಜ್ ಅಂಚನ್, ಸುದೀಪ್ ಮತ್ತಿತರರು ಉಪಸ್ಥಿತರಿದ್ದರು.
16 Jun 2025, 08:11 PM
Category: Kaup
Tags: