ಕೊರೊನಾ ಕಷ್ಟಕಾಲದಲ್ಲಿ ನಷ್ಟದಲ್ಲಿದೆ ಸಾಂಪ್ರದಾಯಿಕ ಶೈಲಿಯ ಕರಕುಶಲ ವಸ್ತುಗಳು
Thumbnail
ತುಂಬಾ ಬಡತನದ ಬೇಗೆಯಿಂದ ಬಳಲುತ್ತಿರುವ ಕುಟುಂಬಗಳು ಕಾರ್ಕಳ ತಾಲೂಕಿನ ಕಡ್ತಲದ ಚೆನ್ನಿಬೆಟ್ಟು ಸಮೀಪದಲ್ಲಿವೆ .ಲಾಕ್ಡೌನ್ ತುಂಬಾ ನೋವು ತಂದುಕೊಟ್ಟಿದೆ .ಈ ವಿಷಯವನ್ನು ಇಲ್ಲಿ ಉಲ್ಲೆಖಿಸಲೇಬೇಕು . ಕೋಲ ಕಟ್ಟಳೆಗಳು ಹೀಗೆ ಸಾಂಪ್ರದಾಯಿಕ ಶೈಲಿಯ ತುಳುನಾಡಿನ ಕಲೆಯನ್ನು ಉಳಿಸಿಕೊಂಡು ಕಲಿಸಿಕೊಂಡು ಬರುವ ಜನರು ಅವರು . ಸುಧಾಕರಣ್ಣ ಕೋಲ ಮೊದಲಾದ ವೇಷಗಳನ್ನು ಹಾಕುತ್ತ ಕೋಲ ಕಟ್ಟುವಲ್ಲಿ ತುಳುನಾಡಿನಲ್ಲಿ ತುಂಬಾ ಹೆಸರನ್ನು ಪಡೆದ ವ್ಯಕ್ತಿ ತುಂಬಾ ಸರಳ ವ್ಯಕ್ತಿತ್ವ ಅವರದ್ದು. ಈಗ ಕೋಲಗಳು ಇಲ್ಲ ಲಾಕ್ಡೌನ್ ಇಡಿ ಜೀವನದ ಅನ್ನವನ್ನೆ ಕಿತ್ತುಕೊಂಡಂತಿದೆ .ಆದರೆ ಅವರು ಸುಮ್ಮನೆ ಕುಳಿತ ವ್ಯಕ್ತಿ ಅಂತು ಅಲ್ಲವೆ ಅಲ್ಲ ,ಆದರೂ ತಮ್ಮ ಕುಲಕಸುಬು ಏಡಿ ಹಿಡಿಯುವ ಗೂರಿಗಳು, ಕೋಳಿ ಸಾಕುವ ಗೂಡುಗಳು ಗೊಬ್ಬರದ ಬುಟ್ಟಿ ಗಳು ,ಗೂಡುದೀಪಗಳು ಹೀಗೆ ವಿವಿಧ ಆಕಾರದ ಬಿದಿರಿನ ಕೋಲುಗಳಿಂದ ತಯಾರಿಸುತ್ತಾರೆ .ಅವರ ಜೊತೆ ಜಗ್ಗು ಪರವ ಕೂಡ ಭತ್ತದ ಗಳಗೆಗಳನ್ನು ಮಾಡುತ್ತಾರೆ. ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟರೆ ಸೇಲ್ ಅಗ್ತಾ ಇಲ್ಲ .ಜನರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಸುಂದರ ಪರವ ಒಳ್ಳೆಯ ಗೊಬ್ಬರದ ಬಟ್ಟಿ ಮಾಡುತ್ತಾರೆ . ಹೀಗೆ ಹಲವಾರು ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ಮಾಡುತ್ತಾ ಬರುತ್ತಿರುವ ಕುಟುಂಬಗಳು. ಬಿದಿರಿನ ಕಡ್ಡಿಗಳಿಗಾಗಿ ನೂರಾರು ಕಿ.ಮಿ ನಡೆದು ಶ್ರಮ ಪಡುತ್ತಾರೆ. ಅವರಿಗೆ ವಿದ್ಯೆ ಕಲಿತವರಲ್ಲ. ಬದುಕಿಗೆ ಆಧಾರವೆ ಕೊಲಗಳು. ಆದರೆ ಈಗಿನ ಪರಿಸ್ಥಿಗೆ ಹೊಂದಿಕೊಳ್ಳಬೇಕಾದರೆ ಕುಲಕಸುಬು ಕರಕುಶಲ ವಸ್ತುಗಳನ್ನು ತಯಾರಿಸುತಿದ್ದಾರೆ. ಭತ್ತ ಹೋರುವ ಬುಟ್ಟಿ ಹಾಗು ಅಕ್ಕಿ ಗೇರುವ ತಡಪೆಗಳನ್ನು ಬಾಬಣ್ಣ ಮಾಡುತ್ತಾರೆ ಅವರದ್ದು ಅಧ್ಬುತ ಕಲೆ.ಆದರೆ ಈಗಿನ ಪರಿಸ್ಥಿತಿ ತುಂಬಾ ಕಷ್ಟದ್ದಾಗಿದೆ. ಅವರಿಗೆ ಸ್ಪಂದಿಸಲು ಸಾಧ್ಯ ವಾಗುತಿಲ್ಲ.ಮನೆಯಲ್ಲಿ ಬುಟ್ಟಿ ಗೂರಿಗಳು ಮಾಡಿಟ್ಟು ವಾರಗಳೆ ಕಳೆದಿವೆ . ಮಾರಾಟವಾಗದೆ ಕಷ್ಟ ಅನುಭವಿಸುತಿದ್ದಾರೆ. ದಯವಿಟ್ಟು ನಿಮಗೆ ಗುರಿಗಳು ಕೋಳಿ ಗೂಡುಗಳು ಗೂಡುದೀಪಗಳು, ಹೀಗೆ ವಿವಿಧ ಅಕಾರದ ಕಲೆಗಳು ಬಲ್ಲವರು. ಅವರು ಶ್ರಮಿಕ ವ್ಯಕ್ತಿಗಳು.ನಿಮಗೆ ಯಾವುದಾದರೂ ಬೇಕಾದರೆ ದಯವಿಟ್ಟು ಸ್ಪಂದಿಸಿ ಅವರ ಶ್ರಮಕ್ಕೆ ಮನ್ನಣೆ ಕೊಟ್ಟರೆ ತುಂಬಾ ಖುಷಿ ಪಡುತ್ತಾರೆ. ದಯವಿಟ್ಟು ಎಲ್ಲರಿಗೂ ಕಳುಹಿಸಿ ಅವರ ಶ್ರಮಕ್ಕೆ ಸ್ಪಂದಿಸಿ ; ಗೂರಿಗಳು ಕೋಳಿಗೂಡುಗಳಿಗಾಗಿ ಸುಧಾಕರ್ ಅವರ ಮೊಬೈಲ್‌ ಸಂಖ್ಯೆ : +917760485701 ಗಳಗೆ ಗೂರಿಗಳು ಜಗ್ಗು 8497077496 ಗೊರಬುಗಳು ಗೊಬ್ಬರ ಬಟ್ಟಿಗಳು ಸುಂದರ :9632813329 ಅಕ್ಕಿ ಗೇರುವ ತಡಪೆಗಳಿಗಾಗಿ ಬಾಬು : 8105307574 ದಯವಿಟ್ಟು ಸ್ಪಂದಿಸಿ ನಿಮ್ಮವನು, ರಾಂ ಅಜೆಕಾರು
Additional image Additional image Additional image
14 Oct 2020, 10:32 PM
Category: Kaup
Tags: