ಯುವವಾಹಿನಿ ಕಾಪು ಘಟಕ : 80ನೇ ಸ್ವಾತಂತ್ರ್ಯ ದಿನಾಚರಣೆ
Thumbnail

ಕಾಪು : ಇಲ್ಲಿನ ಲೈಟ್ ಹೌಸ್ ರೆಸಾರ್ಟ್ ನಲ್ಲಿ  80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಯುವವಾಹಿನಿ (ರಿ.) ಕಾಪು ಘಟಕದ ಅಧ್ಯಕ್ಷೆ ಅನಿತಾ ಸುರೇಂದ್ರ ಮತ್ತು ಜೇಸಿಐ ಕಾಪು ಘಟಕದ ಅಧ್ಯಕ್ಷ  ವಿಕ್ಕಿ ಪೂಜಾರಿ ಮಡುಂಬು ಹಾಗೂ ಮಾಜಿ ಸೈನಿಕ ಕೇಶವ ಪೂಜಾರಿ ಅವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.

ಧ್ವಜಾರೋಹಣದ ಬಳಿಕ ವಿಕ್ಕಿ ಪೂಜಾರಿ ಅವರು ಧ್ವಜಾರೋಹಣದ ಉದ್ದೇಶ ಹಾಗೂ ದೇಶಭಕ್ತಿಯ ಕುರಿತು ಮಾತನಾಡಿದರು. 

ಮಾಜಿ ಸೈನಿಕರಾದ ಕೇಶವ ಪೂಜಾರಿ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಹಾಗೂ ಯುವಜನತೆಯ ಜವಾಬ್ದಾರಿಗಳ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಲೈಟ್ ಹೌಸ್ ರೆಸಾರ್ಟ್ ಸಿಬ್ಬಂದಿ ಸಂದೀಪ್  ಅವರ ಸೇವೆಯನ್ನು ಗುರುತಿಸಿ ದೀಪಕ್ ಕುಮಾರ್ ಎರ್ಮಾಳ್ ಸನ್ಮಾನಿಸಿದರು.

ಯುವವಾಹಿನಿ ಕಾಪು ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಘಟಕದ ಕಾರ್ಯದರ್ಶಿ ಸುನೀಲ್ ಎಸ್. ಪೂಜಾರಿ ಸ್ವಾಗತಿಸಿ, ನಿರೂಪಿಸಿದರು. 

16 Aug 2026, 09:28 AM
Category: Kaup
Tags: