ಜೇಸಿಐ ಕಾಪು : 80ನೇ ಸ್ವಾತಂತ್ರ್ಯೋತ್ಸವ ಆಚರಣೆ
Thumbnail

ಕಾಪು : 80 ನೇ ಸ್ವಾತಂತ್ರ್ಯೋತ್ಸವವನ್ನು ಕಾಪು ಜೆಸಿಐ ಭವನದಲ್ಲಿ ಆಚರಿಸಲಾಯಿತು.

ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಧ್ವಜಾರೋಹಣಗೈದು ಮಾತನಾಡಿ, ಎಲ್ಲೆಡೆ ಸಂಭ್ರಮದ ವಾತಾವರಣದಲ್ಲಿ ನಾವಿದ್ದೇವೆ. ದೇಶ ಪ್ರೇಮ ಮತ್ತು ದೇಶ ಭಕ್ತಿಯ ಸಂಕೇತವಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಈ ದಿನವನ್ನು ಸಡಗರದಿಂದ ಆಚರಣೆ ಮಾಡುತ್ತಿರುವುದು ಶ್ಲಾಘನಿಯ ಎಂದು, ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು.

ಪೂರ್ವಾಧ್ಯಕ್ಷ ಸುಧಾಕರ್ ಸಾಲ್ಯಾನ್ ಧ್ವಜ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡಿ ಸಮಾರಂಭವನ್ನು ನಿರ್ವಹಿಸಿದರು.

ಉಪಾಧ್ಯಕ್ಷ ಕಾರ್ತಿಕ್ ಆಚಾರ್ಯ ಅವರು ಕಾಪು ಜಯಲಕ್ಷ್ಮಿ ಜ್ಯುವೇಲರ್ಸ್ ಪರವಾಗಿ ಸಿಹಿತಿಂಡಿಯನ್ನು ಹಂಚಿದರು.

 ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ, ಪೂರ್ವಾಧ್ಯಕ್ಷ ಜಗದೀಶ್ ಬಂಗೇರ, ಪ್ರವೀಣ್ ಕುಮಾರ್ ಗುರ್ಮೆ, ರಮೇಶ್ ನಾಯ್ಕ್, ಕಾರ್ಯದರ್ಶಿ ಶ್ರುತಿ ಶೆಟ್ಟಿ, ಸದಸ್ಯರಾದ ಜಯಂತಿ ಅರುಣ್ ಶೆಟ್ಟಿ ಮತ್ತು ಶಶಿಪ್ರಭಾ ಶೆಟ್ಟಿ ಹಾಗೂ ಸಾವಿತ್ರಿ ರಮೇಶ್ ನಾಯ್ಕ್ ಉಪಸ್ಥಿತರಿದ್ದರು.

16 Aug 2026, 09:23 AM
Category: Kaup
Tags: