ದಾವಣಗೆರೆಯಲ್ಲಿ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪಡುಬಿದ್ರಿಯ ಶ್ರಾವ್ಯ ಆರ್. ಅಂಚನ್
Thumbnail
ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ರಂಗಗಳ ಸಾಧನೆಗಳನ್ನು ಪರಿಗಣಿಸಿ ಇಂದು ದಾವಣಗೆರೆಯ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಪಡುಬಿದ್ರಿಯ ಶ್ರಾವ್ಯ ಆರ್. ಅಂಚನ್ ರವರಿಗೆ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಬಾರಿಯ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ 613 (ಶೇ. 98.08) ಅಂಕ ಗಳಿಸಿದ್ದು ಶೈಕ್ಷಣಿಕ ಸಾಧನೆಯೊಂದಿಗೆ, ಕ್ರೀಡಾಕ್ಷೇತ್ರದಲ್ಲಿ ಕಬಡಿಯಲ್ಲಿ ಎರಡು ಬಾರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಪ್ರತಿಭಾನ್ವಿತ ನೃತ್ಯಪಟುವೂ ಆಗಿದ್ದಾರೆ. ಪಡುಬಿದ್ರಿಯ ರವಿರಾಜ್ ಕೋಟ್ಯಾನ್ ಮತ್ತು ಶ್ಯಾಮಲಾ ದಂಪತಿಯ ಪುತ್ರಿಯಾಗಿದ್ದಾರೆ.
01 Nov 2020, 01:08 PM
Category: Kaup
Tags: