ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ : ಹಿರಿಯ ಮುದ್ರಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಇವರ ವತಿಯಿಂದ ಹಿರಿಯ ಮುದ್ರಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿಶ್ರಾಂತ ಉಪಸಂಪಾದಕರು, ಉದಯವಾಣಿ ಮಣಿಪಾಲದ ನಿತ್ಯಾನಂದ ಪಡ್ರೆ ಭಾಗವಹಿಸಿದ್ದರು.
ಸನ್ಮಾನ : ದೊಡ್ಡಣಗುಡ್ಡೆಯ ವರದೇಂದ್ರ ಪ್ರಿಂಟರ್ಸ್ ಮಾಲಕರಾದ ಮಂಜುನಾಥ್ ಶೆಣೈ, ಕಾಪುವಿನ ವಿವೇಕ್ ಪ್ರಿಂಟರ್ಸ್ ಮಾಲೀಕರಾದ ವಿಠಲ ಪೂಜಾರಿ, ಕೋಟೇಶ್ವರದ ಅರುಣ ಪ್ರಿಂಟರ್ಸ್ ಮಾಲಕರಾದ ವೆಂಕಟರಮಣ ಐತಾಳ್, ಕಾರ್ಕಳದ ಸಮತಾ ಗ್ರಾಫಿಕ್ಸ್ ಮಾಲಕರಾದ ಶಿಶುಪಾಲ ಜೈನ್ ರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ : ಎಸ್ಸೆಸ್ಸೆಲ್ಸಿಯಲ್ಲಿ ಶೇ.75 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.75 ಕ್ಕಿಂತ ಮೇಲ್ಪಟ್ಟು ಅಂಕ ಬಂದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮನೋಜ್ ಕಡಬ, ಕೋಶಾಧಿಕಾರಿ ಸುಧೀರ್ ಡಿ. ಬಂಗೇರ, ಮುದ್ರಣಾಲಯಗಳ ಮಾಲೀಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
