ಕಾಪು ತಾಲೂಕಿನ ಪಡುಬಿದ್ರಿ, ಶಿರ್ವ, ಬೆಳ್ಳೆ, ಬೆಳಪು ಗ್ರಾಮಗಳು 5 ದಿನ ಸಂಪೂರ್ಣ ಲಾಕ್ಡೌನ್
Posted On:
01-06-2021 07:48PM
ಕಾಪು : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದ ನಿರ್ಣಯದಂತೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ, ಶಿರ್ವ, ಬೆಳ್ಳೆ, ಬೆಳಪು ಗ್ರಾಮಗಳಲ್ಲಿ 50ಕ್ಕಿಂತ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣಗಳು ಬಂದಂತಹ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡಲು ಆಯಾಯ ಗ್ರಾಮಪಂಚಾಯಿತಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜೂನ್ 2, ಬುಧವಾರ ಬೆಳಿಗ್ಗೆ 6ರಿಂದ ಜೂನ್ 7, ಸೋಮವಾರ ಬೆಳಿಗ್ಗೆ 6ರ ತನಕ ಸಂಪೂರ್ಣ ಲಾಕ್ಡೌನ್ ಇರಲಿದೆ.
ಆಸ್ಪತ್ರೆ, ಮೆಡಿಕಲ್ ಸ್ಟೋರ್ ಗಳಿಗೆ, ಈಗಾಗಲೇ ಅನುಮತಿ ಪಡೆದಿರುವ ಮದುವೆ ಸಮಾರಂಭಕ್ಕೆ ಅವಕಾಶ, ಹಾಲು ಹೋಂ ಡೆಲಿವರಿ, ಡೈರಿಗೆ ನೀಡಲು ಅವಕಾಶ, ಅಗತ್ಯ ತುರ್ತು ವೈದ್ಯಕೀಯ ಸೇವಾ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಸಂಪೂರ್ಣ ಲಾಕ್ ಡೌನ್ ಇರುವ ಗ್ರಾಮಗಳಲ್ಲಿ ಇಂದು ಬೆಳಿಗ್ಗೆ 6ರಿಂದ 11ರವರೆಗೆ ದಿನಸಿ ಸಾಮಗ್ರಿ ಕೊಳ್ಳಲು ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪಡುಬಿದ್ರಿ ಮಾರ್ಕೆಟ್ನಲ್ಲಿ ಜನಜಂಗುಳಿ ಅತಿಯಾಗಿದ್ದು, ಜನರಲ್ಲಿ ಸಾಮಾಜಿಕ ಅಂತರ ಇಲ್ಲವಾಗಿದ್ದು ಸಂಬಂಧಿತ ಇಲಾಖೆಗಳು ಯಾವುದೇ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿರದ್ದು ಕಂಡುಬಂದಿದೆ.