ಪಡುಬಿದ್ರಿ : ಇತಿಹಾಸ ಪ್ರಸಿದ್ಧ ಪಡುಬಿದ್ರಿ ಮಾಗಣೆಯ ಶ್ರೀ ಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಸ್ಥಾನವು ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಪರ್ವಕಾಲದಲ್ಲಿ ದೈವರಾಜ ಶ್ರೀ ಕೋಡ್ದಬ್ಬು ದೈವಸ್ಥಾನಗಳು- ಏಳು ಮಾಗಣೆ (ಮುಂಡಾಲ ಸಮುದಾಯ) ಪಡುಬಿದ್ರಿ ವತಿಯಿಂದ ನೂತನ ತುಳಸಿ ಕಟ್ಟೆ(ವೃಂದಾವನ ಕಟ್ಟೆ)ಯ ಸಂಪೂರ್ಣ ವೆಚ್ಚವನ್ನು ನೀಡಲು ಸಂಕಲ್ಪಿಸಲಾಗಿದೆ.
ಏಳು ಮಾಗಣೆಯ ಶ್ರೀಕೋಡ್ದಬ್ಬು ದೈವಸ್ಥಾನದ ನಿಯೋಗವು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯನ್ನು ಭೇಟಿ ಮಾಡಿ, ಸಂಕಲ್ಪಿತ ಧರ್ಮಕಾರ್ಯವನ್ನು ಪ್ರಸ್ತಾಪಿಸಿ ಸಮ್ಮತಿ ಪತ್ರವನ್ನು ನೀಡಿ, ದೇವಸ್ಥಾನದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ದೇವತಾ ಪ್ರಾರ್ಥನಾ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಶ್ರೀನಾಥ್ ಹೆಗ್ಡೆ, ಪ್ರಕಾಶ್ ದೇವಾಡಿಗ, ಅನಿಲ್ ಶೆಟ್ಟಿ, ಏಳು ಮಾಗಣೆಯ ಶ್ರೀಕೋಡ್ದಬ್ಬು ದೈವಸ್ಥಾನದ ಗೌರವಾಧ್ಯಕ್ಷರಾದ ಶೇಖರ್ ಅಂಗಡಿಬೆಟ್ಟು, ಅಧ್ಯಕ್ಷರಾದ ಸದಾನಂದ ಬೊಗ್ಗರಿಲಚ್ಚಿಲ್, ಪ್ರಧಾನ ಕಾರ್ಯದರ್ಶಿ ಸಂತೋಷ್ ನಂಬಿಯಾರ್ ,ಕೋಶಾಧಿಕಾರಿ ರಮೇಶ್, ಪ್ರಮುಖರಾದ ಬಾಬು ಕೋಟ್ಯಾನ್ ಕೊಂಕನಡ್ಪು, ಕಿಟ್ಟು ಕುಮಾರ್, ಸುರೇಶ್ ಪಡುಬಿದ್ರಿ, ಪ್ರಸನ್ನ ಕುಮಾರ್, ಬಾಲಕೃಷ್ಣ ಉಪಸ್ಥಿತರಿದ್ದರು.