ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ಲಾಕ್ಡೌನ್ ಸಂದರ್ಭದಲ್ಲಿ ವಿವಿಧೆಡೆ ರೇಷನ್ ಕಿಟ್ ವಿತರಣೆ
Posted On:
05-06-2021 09:16PM
ಕಾಪು : ಹನೆಹಳ್ಳಿ, ಲಕ್ಷ್ಮೀ ನಗರ, ಮಿಷನ್ ಚರ್ಚ್, ಕಾಪು ಪುರಸಭೆ, ಟೀಮ್ ಸಮಗ್ರ ಉಡುಪಿ, ಚಿತ್ಪಾಡಿ ಅರ್ಹ ಫಲಾನುಭವಿ 162 ಕುಟುಂಬಕ್ಕೆ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ಪರಿಸರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಲಾಕ್ಡೌನ್ ಸಂದರ್ಭದಲ್ಲಿ ರೇಷನ್ ಕಿಟ್ ವಿತರಿಸಲಾಯಿತು. ಜಿಲ್ಲಾದ್ಯಂತ 3600 ವರೆಗೆ ಕಿಟ್ ಗಳನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಹನೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸಿಂ ಬಾರ್ಕೂರು ಇವರ ಮನವಿ ಮೇರೆಗೆ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿರವರಿಗೆ ಕಿಟ್ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ರಮಾನಂದ ಶೆಟ್ಟಿ,ಪಿ.ಡಿ.ಓ ಅರುಂಧತಿ ಸದಸ್ಯರು ಉಪಸ್ಥಿತರಿದ್ದರು.
ಯು.ಬಿ.ಎಂ ಚರ್ಚ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಡ್ನ ಜತ್ತನ್ನರವರ ಮನವಿ ಮೇರೆಗೆ ಕಿಟ್ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಫಾ.ರೇ ಸಂತೋಷ್, ಫಾ.ರೇ.ಸ್ಟಿಫನ್ ಮಂದಿ, ಫಾ.ರೇ.ಮನೋಜ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಟೀಮ್ ಸಮಗ್ರ ತಂಡ ಉಡುಪಿ ಜಿಲ್ಲೆ ಇದರ ಮನವಿಯ ಮೇರೆಗೆ ಅಗತ್ಯವಿರುವ ಕೆಲವು ಕುಟುಂಬಗಳಿಗೆ ರೇಶನ್ ಕಿಟ್ ಗಳನ್ನು ಶನಿವಾರ ವಿತರಿಸಲಾಯಿತು. ಟೀಮ್ ಸಮಗ್ರ ತಂಡ ಉಡುಪಿ ಜಿಲ್ಲೆ ಪರವಾಗಿ ಮೈಕಲ್ ರೊಡ್ರಿಗಸ್ ಮತ್ತು ಅಂಕಿತ್ ಶೆಟ್ಟಿ ಅವರು ಕಿಟ್ ಗಳನ್ನು ಪಡೆದು ಅಗತ್ಯ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದರು. ತೆಂಕನಿಡಿಯೂರು ಪಂಚಾಯತ್
ಲಕ್ಷೀನಗರ ವಾರ್ಡ್ ನ ಸದಸ್ಯರಾದ ಶರತ್ ಶೆಟ್ಟಿ ಬೆಲ್ಕಳೆ ಮನವಿ ಮೇರೆಗೆ ಕಿಟ್ ಹಸ್ತಾಂತರಿಸಲಾಯಿತು,ಈ ಸಂದರ್ಭದಲ್ಲಿ ವೆಂಕಟೇಶ್ ಕುಲಾಲ್, ರವಿರಾಜ್, ಸತೀಶ್ ಕುಲಾಲ್ ಉಪಸ್ಥಿತರಿದ್ದರು.
ಕಾಪು ಪುರಸಭಾ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಅನಿಲ್ ಕುಮಾರ್ ಮನವಿ ಮೇರೆಗೆ ಮತ್ತು ಸ್ಪಂದನ ವಾಹಿನಿಯ ಪ್ರಶಾಂತ್ ಸುವರ್ಣ ಮನವಿ ಮೇರೆಗೆ ಸಿಬ್ಬಂದಿ ವರ್ಗದವರಿಗೆ,ಚಿತ್ಪಾಡಿಯಲ್ಲಿ ಶೋಭಾ ಶೆಟ್ಟಿ ಮನವಿ ಮೇರೆಗೆ ಕಿಟ್ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಮಲಬಾರ್ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ರಾಘವೇಂದ್ರ ಭಟ್, ತಸ್ಲಿಮ್, ಉಪಸ್ಥಿತರಿದ್ದರು.