ಕಾಪು : ಶ್ರೀ ದೇವಿ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮ
Posted On:
05-06-2021 09:22PM
ಕಾಪು : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು ಕಾಪು ಶ್ರೀ ಕಲ್ಕುಡ ದೈವಸ್ಥಾನ ವಠಾರದಲ್ಲಿ ಶ್ರೀ ದೇವಿ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್ ಕಾಪು ಮತ್ತು ಕಾಪು ಅರಣ್ಯ ಇಲಾಖೆಯ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು .
ಈ ಸಂದರ್ಭದಲ್ಲಿ ಕಾಪು ಶ್ರೀ ದೇವಿ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್ನ ಅಧ್ಯಕ್ಷರು ಅನಿಲ್ ಕುಮಾರ್ ರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಶುಭಕೋರಿದರು.
ಅರಣ್ಯ ಅಧಿಕಾರಿ ಶ್ರೀ ಜೀವನ್ ದಾಸ್ ಶೆಟ್ಟಿ. ಮಂಜುನಾಥ್ ಮತ್ತು ಶ್ರೀದೇವಿ ಕ್ಲಬ್ ನ ಕಾರ್ಯದರ್ಶಿ ಶ್ರೀನಾಥ್ ಆಚಾರ್ಯ, ಕೋಶಾಧಿಕಾರಿ ಅನಿಲ್ ಪಾಡಿಮನೆ, ಶ್ರೀ ಧೂಮಾವತಿ ಯುವ ಸಮಿತಿಯ ಅಧ್ಯಕ್ಷರು ಶ್ರೀ ರಮಾನಾಥ್ ಶೆಟ್ಟಿ ಮತ್ತು ಶ್ರೀ ದೇವಿ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.