ಕಾಪು : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಳಕುಂಜೆ ಗ್ರಾಮದಲ್ಲಿ ಗಿಡನೆಡುವ ಕಾರ್ಯಕ್ರಮ ಜರುಗಿತು.
ಬಳಕುಂಜೆ ಗ್ರಾಮ ಪಂಚಾಯತ್ ಬಳಿಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ಪಂಚಾಯತ್ ಅಧ್ಯಕ್ಷೆ ಮಮತಾ ಡಿ.ಪೂಂಜ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಪ್ರಸಾದ್ ಕುಮಾರ್, ಜೆಜೆಎಂ ತಂಡದ ನಾಯಕ ಶಿವರಾಮ್ ಸಹಕರಿಸಿದರು. ತಂಡದ ಸಿಬ್ಬಂದಿಗಳಾದ ದಯಾನಂದ, ಫಲಹಾರೇಶ್, ಚರಣ್, ಅಶ್ವಿನ್, ಮಹಾಂತೇಶ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್.ಬಿ, ಕಾರ್ಯದರ್ಶಿ ಮಂಜುನಾಥ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.