ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದಿಂದ 22 ನೇ ಸೇವಾ ಯೋಜನೆ
Posted On:
05-06-2021 09:37PM
ಮಂಗಳೂರು : ಬೆಳ್ತಂಗಡಿಯ ಓಡಿಲ್ನಾಳ ಗ್ರಾಮದ ಮೈರಲ್ಕೆ ನಿವಾಸಿ ಸುರೇಶ್ ಪೂಜಾರಿ (44 ವರ್ಷ) ಇವರು ವೃತ್ತಿಯಲ್ಲಿ ಅಟೋಚಾಲಕರಾಗಿದ್ದು, ತೀರಾ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ.
ಮನೆಯಲ್ಲಿ ಪತ್ನಿ ಮತ್ತು ಎರಡು ಹೆಣ್ಣು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದ ಇವರಿಗೆ ಈ ಕೊರೊನ ಎನ್ನುವ ಮಹಾ ಮಾರಿಯ ಲಾಕ್ ಡೌನ್ ಸಂದರ್ಭದಲ್ಲಿ ಅನಾರೋಗ್ಯಕ್ಕೆ (ಮಿದುಳಿನ ರಕ್ತಸ್ರಾವ) ಒಳಗಾಗಿದ್ದು "ಬಲಿಷ್ಠ ಬಿಲ್ಲವೆರ್" ವಾಟ್ಸಾಪ್ ತಂಡದ ದಾನಿಗಳ ಸಹಕಾರದಿಂದ ಇವರ ಚಿಕಿತ್ಸೆಗಾಗಿ 10,000₹ ರೂಪಾಯಿಗಳನ್ನು ಬೆಳ್ತಂಗಡಿಯ ಮಾಜಿ ಶಾಸಕರಾದ ವಸಂತ ಬಂಗೇರರವರ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಲಿಷ್ಠ ಬಿಲ್ಲವೆರ್ ತಂಡದ ಮುಖ್ಯಸ್ಥರುಗಳಾದ ಸನತ್ ಅಂಚನ್, ಸಂಪತ್ ಅಂಚನ್ ಹಾಗೂ ಸದಸ್ಯರುಗಳಾದ ಸಂತೋಷ್ ಅಂಚನ್, ಹೇಮಂತ್ ಕೋಟ್ಯಾನ್, ರಾಜೇಶ್ ಪೂಜಾರಿ ಮದ್ದಡ್ಕ, ಸಂದೀಪ್ ಸುವರ್ಣ ಕುಕ್ಕೇಡಿ, ತಿಲಕ್ ಕೋಟ್ಯಾನ್ ಮತ್ತು ಪ್ರಜ್ಞಾ ಓಡಿಲ್ನಾಳ ಉಪಸ್ಥಿತರಿದ್ದರು.