ಪಡುಬಿದ್ರಿ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಪಡುಬಿದ್ರಿ ಗ್ರಾಮ ಪಂಚಾಯತಿಯ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ನ ಅಧ್ಯಕ್ಷ ರೊ. ಕೇಶವ ಸಿ ಸಾಲಿಯಾನ್, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರೋ.ಯಶೋದ, ರೋಟರಿ ಕಾರ್ಯದರ್ಶಿ ರೋ. ನಿಯಾಜ್, ರೋಟರಿ ಝೋನಲ್ ಕೋ ಆರ್ಡಿನೇಟರ್ ರೋ.ರಮೀಜ್ ಹುಸೈನ್, ಪಂಚಾಯತ್ ಕಾರ್ಯದರ್ಶಿಯಾದ ರೂಪಾಲತಾ, ಸದಸ್ಯರಾದ ಜ್ಯೋತಿ ಮೆನನ್ ಮತ್ತಿತರು ಉಪಸ್ಥಿತರಿದ್ದರು.