ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಸುವಣ೯ ಎಂಟರ್ಪ್ರೆಸಸ್ ಮತ್ತು ಶ್ರೀರಾಮ ಫ್ರೆಂಡ್ಸ್ ಹೇರೂರು ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ 24 ಸೆನ್ಸ್ ಗದ್ದೆಯಲ್ಲಿ ಮಿಯಾವಾಕಿ ದೇವರ ಕಾಡು ವನ ಮಾಡುವ ಸಲುವಾಗಿ ವಿವಿಧ ಜಾತಿಯ ಗಿಡ ನೆಡುವ ಕಾಯ೯ಕ್ರಮ ಹೇರೂರುನಲ್ಲಿ ನಡೆಯಿತು.
ಜಯಂಟ್ಸ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂದನ್ ಹೇರೂರು ರವರ ಮುತುವಜಿ೯ ಯಲ್ಲಿ ನಡೆದ ಈ ಕಾಯ೯ಕ್ರಮದ ಉದ್ಘಾಟನೆಯನ್ನು ಮಡಿಕೇರಿ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾII ರಾಮಚಂದ್ರ ಕಾಮತ್ ನೆರವೇರಿಸಿ ಶುಭ ಹಾರೈಸಿದರು.
ಈ ಸಂದಭ೯ದಲ್ಲಿ ಡಾ|| ವಿಜಯೀoದ್ರ ವಸಂತ್, ವೇಣುಗೋಪಾಲ್ ಹೆಬ್ಬಾರ್, ಸುನಿತಾ ಮಧುಸೂದನ್, ಜಯಂಟ್ಸ್ ನ ಸುಂದರ ಪೂಜಾರಿ ಮೂಡುಕುಕ್ಕುಡೆ, ಮಿಲ್ಟನ್ ಒಲಿವರ್, ವಿವೇಕ್, ಸುರೇಶ್, ರವಿರಾಜ್ ಹೆಚ್.ಪಿ ,ರಾಘವೇಂದ್ರ ಪ್ರಭು,ಕವಾ೯ಲು ಮತ್ತಿತರರು ಉಪಸ್ಥಿತರಿದ್ದರು.