ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿಯ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ತಂಡದಿಂದ ಕುಂದಾಪುರ ಮೊಳಹಳ್ಳಿ ಗ್ರಾಮದ ಸರಕಾರಿ ಶಾಲೆಯ ಮಕ್ಕಳ ಪೋಷಕರಿಗೆ ದಿನಸಿ ಕಿಟ್ ವಿತರಣೆ

Posted On: 12-06-2021 08:05PM

ಉಡುಪಿ, ಜೂ.12 : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣಿಹಾರ, ಮೊಳಹಳ್ಳಿ ಗ್ರಾಮ, ಕುಂದಾಪುರ ತಾಲೂಕು ಇಲ್ಲಿಗೆ ಭೇಟಿನೀಡಿ ಅಲ್ಲಿನ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ವಿಚಾರಿಸಿ ಎಲ್ಲಾ ವಿದ್ಯಾರ್ಥಿಗಳಿಗೆ (25 ವಿದ್ಯಾರ್ಥಿಗಳು)ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿದ್ಯಾರ್ಥಿಗಳ ಪೋಷಕರಿಗೆ ಹಸ್ತಾಂತರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಪೇಟೆ ಕಡೆಗಳಲ್ಲಿ ಹಲವಾರು ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮ ನಡೆಸುತ್ತಾರೆ. ಆದರೆ ಹಳ್ಳಿ ಪ್ರದೇಶಗಳಲ್ಲಿ ಇಂತಹ ಸಮಾಜ ಸೇವೆ ಅಗತ್ಯವಿದೆ. ಹಳ್ಳಿ ಭಾಗದಲ್ಲೂ ಆಸರೆ ತಂಡವು ಕಾರ್ಯನಿರ್ವಹಿಸುವುದು ಸಂತಸ ತಂದಿದೆ ಎಂದರು.

ದಿನಸಿ ಸಾಮಗ್ರಿಗಳ ಹಸ್ತಾಂತರ ಕಾರ್ಯವನ್ನು ಆಸರೆ ತಂಡದ ಸ್ಥಾಪಕಾಧ್ಯಕ್ಷರು ಆದ ಡಾ. ಕೀರ್ತಿ ಪಾಲನ್ ನೆರವೇರಿಸಿದರು.

ಈ ಸಂದರ್ಭ ತಂಡದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಎಂ. ಕೆ, ಜೊತೆ ಕಾರ್ಯದರ್ಶಿ ಶ್ರೀಕಾಂತ್ ಅಮಿನ್ ಹಾಗೂ ಕೋಶಾಧಿಕಾರಿ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲ ಯಶವಂತ್ ಸ್ವಾಗತಿಸಿದರು. ದಿನೇಶ್ ಬಿದ್ಕಲಕಟ್ಟೆ ವಂದಿಸಿದರು.