ಉಡುಪಿ : ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ ಹಾಗೂ ವಿಶ್ವ ಬಂಟ್ಸ್ ಯೂತ್ ವಿಂಗ್ ವತಿಯಿಂದ
ದೈವ ಚಾಕ್ರಿ ಮತ್ತು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮವನ್ನು ಬೊಬ್ಬರ್ಯ ದೈವಸ್ಥಾನದ ವಠಾರದಲ್ಲಿ ವಿಶ್ವ ಬಂಟ್ಸ್ ಯೂತ್ ವಿಂಗ್ ಉಡುಪಿ ಮಂಗಳೂರಿನ ಗೌರವ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿಯವರು ಆಹಾರ ಕಿಟ್ ಹಸ್ತಾಂತರ ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಶ್ವ ಬಂಟ್ಸ್ ಯೂತ್ ವಿಂಗ್ ಉಡುಪಿ ಮಂಗಳೂರಿನ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಬೊಬ್ಬರ್ಯ ಯುವ ಸೇವಾ ಸಮಿತಿಯ ಅಧ್ಯಕ್ಷರಾದ ವರದರಾಜ್ ಕಾಮತ್, ಗೌರವ ಅಧ್ಯಕ್ಷರಾದ ಗಣಪತಿ ಕಾಮತ್ ಹಾಗೂ ಸರ್ವ ಸದಸ್ಯರು ಉಪಸ್ಥಿತಿಯಿದ್ದರು.