ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಯಶಸ್ವಿ ಉದ್ಯಮಿ, ಸಮಾಜ ಸೇವಕ ಹಿದಾಯತ್ ಅಡ್ಡೂರು ಅವರಿಂದ ದುಬೈನಲ್ಲಿ "ದ ಪ್ರೆಶ್" ಈ ಕಾಮರ್ಸ್ ಉದ್ಯಮ ಪ್ರಾರಂಭ

Posted On: 18-06-2021 03:17PM

ಮಂಗಳೂರು ಮೂಲದ ದುಬೈನ ಯಶಸ್ವಿ ಉದ್ಯಮಿ, ಸಮಾಜ ಸೇವಕ ಹಿದಾಯತ್ ಅಡ್ಡೂರು ಅವರು ತಮ್ಮ ಹೊಸ ಯೋಜನೆ 'ದ ಪ್ರೆಶ್' ಮೂಲಕ ದುಬೈ, ಶಾರ್ಜಾ, ಅಬುಧಾಬಿಯಲ್ಲಿ ತಾಜಾ ಮೀನು, ಚಿಕನ್ ಹಾಗು ಮಟನ್ ಮಾಂಸವನ್ನು ಮನೆಗಳಿಗೆ ಪೂರೈಸುವ ಈ ಕಾಮರ್ಸ್ ಉದ್ಯಮವನ್ನು ಗಲ್ಫ್ ರಾಷ್ಟ್ರದ ಅನೇಕ ಉದ್ಯಮಿಗಳು, ದುಬೈಯ ಭಾರತೀಯ ರಾಯಭಾರಿ ಕಛೇರಿಯ ಅಧಿಕಾರಿಗಳು, ಹಾಗೂ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರಾರಂಭಿಸಿದರು.

ಇದರ ಉದ್ಘಾಟನೆಯನ್ನು ದುಬೈನ ಉದ್ಯಮಿ ಹಾಗು ಹಿದಾಯತ್ ಅವರ ಸ್ನೇಹಿತ ರವೂಫ್ ಆಲಿ, executive director Arabia Holdings and Economic Holdings ಅವರು ನೆರವೇರಿಸಿದರು.

ನೆರೆದ ಅತಿಥಿಗಳು ಹಿದಾಯತ್ ಅವರ ಸಮಾಜ ಸೇವೆ, ಅವರು ಮಾಡಿದ ಸಹಾಯ ಹಾಗು ಹಿದಾಯತ್ ಅವರ ಸಾಧನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದರು. ಈ ಸಂದರ್ಭದಲ್ಲಿ ಹಿದಾಯತ್ ಅವರ ಮಿತ್ರರು ಉದ್ಯಮಿಗಳು ಆಗಿರುವ ಫಾರ್ಚೂನ್ ಗ್ರೂಪ್ ನ ಪ್ರವೀಣ್ ಶೆಟ್ಟಿ ವಕ್ವಾಡಿ, ಉದ್ಯಮಿ ಹಾಗು ಕೊಡುಗೈ ದಾನಿ ರೊನಾಲ್ಡ್ ಕೊಲಾಸೋ, ಭಾರತೀಯ ರಾಯಭಾರಿ ಕಛೇರಿಯ ತಾಡು ಮಾಮು ರಶೀದ್ ಹಝಾರಿ, ಅನ್ವರ ನಹ, ರಾಜೇಶ್ ಸಿಕ್ವೇರಾ, ವಲೇರಿಯನ್ ಡಾಲ್ಮೀಡಿಯಾ, ಇಮ್ರಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ನಿರೂಪಣೆಯನ್ನು 92.7 ಬಿಗ್ ಎಫ್ ಎಮ್ ನ ಹೆಸರಾಂತ ರೇಡಿಯೋ ಜಾಕಿ ಎರಾಲ್ ಅವರು ನಡೆಸಿಕೊಟ್ಟರು. ಇಡೀ ಕಾರ್ಯಕ್ರಮ ಝೂಮ್ ಮೀಟಿಂಗ್ ನ ಮೂಲಕ ನಡೆಯಿತು ಬೇರೆ ಬೇರೆ ಸ್ಥಳದಿಂದ ಸುಮಾರು 60 ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.