ಉಡುಪಿ : ವನಮಹೋತ್ಸವ ಕಾಯ೯ಕ್ರಮ
Posted On:
20-06-2021 12:45PM
ಉಡುಪಿ, ಜೂನ್ 20 : ಉಡುಪಿ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟ, ಸುವಣ೯ ಎಂಟರ್ ಪೈಸಸ್ ಬ್ರಹ್ಮಾವರ ಮತ್ತು ಭಾರತೀಯ ವಿಕಾಸ್ ಟ್ರಸ್ಟ್ ಮಣಿಪಾಲ ಇದರ ವತಿಯಿಂದ ಬಿವಿಟಿ ಆವರಣದಲ್ಲಿ ವನಮಹೋತ್ಸವ ಕಾಯ೯ಕ್ರಮ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಮಾತನಾಡಿ , ಈ ಕೋವಿಡ್ ಸಂದಭ೯ದಲ್ಲಿ ನಾವು ಪರಿಸರಕ್ಕೆ ಪೂರಕವಾಗಿ ವತ೯ನೆ ಮಾಡಬೇಕಾದ ಅಗತ್ಯತೆಯಿದೆ. ಗಿಡಗಳನ್ನು ಬೆಳೆಸಿ ರಕ್ಷಣೆ ಮಾಡುದರಿಂದ ಪರಿಸರ ಮತ್ತು ಆರೋಗ್ಯ ಉತ್ತಮವಾಗಲು ಸಾಧ್ಯ ಎಂದರು.
ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಹ ಸಂಚಾಲಕ ಡಾ|| ರಾಮಚಂದ್ರ ಕಾಮತ್ ಪರಿಸರದ ಕುರಿತು ಮತ್ತು ಮುಂದಿನ ಯೋಜನೆ ಕುರಿತು ಮಾತನಾಡಿದರು.
ಈ ಸಂದಭ೯ದಲ್ಲಿ ಸೆಲ್ಕೋ ಸೋಲಾರ್ ಎಜಿಎಂ ಜಗದೀಶ್ ಪೈ, ಡಾll ವಿದ್ಯಾಧರ ಶೆಟ್ಟಿ, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಬಿವಿಟಿ ಕಾಯ೯ ನಿವಾ೯ಹಕ ಮನೋಹರ್ ಕಟ್ಗೇರಿ, ರಾಘವೇಂದ್ರ ಪ್ರಭು,ಕವಾ೯ಲು ಮತ್ತಿತರರು ಉಪಸ್ಥಿತರಿದ್ದರು.