ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ : ಮಹಾತ್ಮ ಗಾಂಧಿ ನರೇಗಾ ಯೋಜನೆ ಮೂಲಕ ಸ್ಥಳೀಯರಿಂದ ತೋಡಿನ ಹೂಳೆತ್ತುವ ಕಾರ್ಯಕ್ಕೆ ಚಾಲನೆ

Posted On: 28-06-2021 07:46PM

ಕಾಪು : ಇನ್ನಂಜೆ ಗ್ರಾಮದ ಮಜಲು ದಡ್ಡು ಪ್ರದೇಶದ ಶೀಲಾಪುರ ಕೆರೆಯಿಂದ ನೀರು ಹರಿವ ತೋಡಿನ ಹೂಳು ಎತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಗ್ರಾಮದ ಜನರು ಈ ಸಮಸ್ಯೆಯ ಬಗ್ಗೆ ಗ್ರಾ.ಪಂ. ನ ಮಾಜಿ ಸದಸ್ಯೆ ಸುಮಲತಾ ಇನ್ನಂಜೆ ಇವರಿಗೆ ತಿಳಿಸಿದಾಗ ಅದನ್ನು ಗ್ರಾಮ ವಾಸ್ತವ್ಯದಲ್ಲಿದ್ದ ತಹಶೀಲ್ದಾರರ ಗಮನಕ್ಕೆ ತಂದರು. ಕೂಡಲೇ ಸ್ಪಂದಿಸಿದ ಅವರು ಇನ್ನಂಜೆ ಪಂಚಾಯತ್ ಗೆ ಈ ಕಾರ್ಯವನ್ನು ಮಾಡಲು ಸೂಚಿಸಿದ್ದರು.

ಈ ಕಾರ್ಯವನ್ನು ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ಸುಮಾರು ಸ್ಥಳೀಯ 20 ಜನರನ್ನು ಒಳಗೊಂಡಂತೆ ನೀರು ಹರಿಯುವ ತೋಡಿನ ಹೂಳನ್ನು ತೆಗೆಯಲಾಯಿತು.

ಪಂಚಾಯತ್ ನ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ರಾಜೇಶ್ ಶೆಟ್ಟಿ ಪಾಂಗಾಳ, ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಆಚಾರ್ಯ, ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ, ಮಂಡೇಡಿ ವಾರ್ಡ್ ಸದಸ್ಯೆ ಜಯಶ್ರೀ ಸಹಕಾರ ನೀಡಿದರು. ಇನ್ನಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಆಚಾರ್ಯ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.