ಬಂಟಕಲ್ಲು ಅಂಚೆ ಕಛೇರಿ ಸ್ಥಳಾಂತರ
Posted On:
01-07-2021 10:19PM
ಕಾಪು : ಸ್ಥಳಾವಕಾಶದ ಕೊರತೆಯಿಂದ ಅಂಚೆ ಕಛೇರಿ ಗ್ರಾಹಕರಿಗೆ ಸಮಸ್ಯೆ ಆಗುತ್ತಿದ್ದ ಹಿನ್ನಲೆಯಲ್ಲಿ ಬಂಟಕಲ್ಲು ಅಂಚೆ ಕಛೇರಿಯನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಸಹಕಾರದಿಂದ ವ್ಯವಸ್ಥಿತವಾದ, ಸ್ಥಳಾವಕಾಶವಿರುವ ಬಂಟಕಲ್ಲು ಮೈತ್ರಿ 2 ಕಟ್ಟಡಕ್ಕೆ ಇಂದು ಸ್ಥಳಾಂತರಗೊಂಡಿತು.
ಬಂಟಕಲ್ಲು ನಾಗರಿಕ ಸಮಿತಿ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿರುವ ಕೆ ಆರ್ ಪಾಟ್ಕರ್ ರವರು ಸಾಂಕೇತಿಕವಾಗಿ ದ್ವೀಪ ಪ್ರಜ್ವಲನೆ ಮಾಡುವುದರ ಮೂಲಕ ಹೊಸ ಕಟ್ಟಡದಲ್ಲಿ ಅಂಚೆ ಕಛೇರಿಗೆ ಚಾಲನೆ ನೀಡಿದರು. ಸದ್ರಿ ಕಛೇರಿಗೆ ಬೇಕಾಗುವ ಪಿಠೋಪಕರಣಗಳನ್ನು ಅಂಚೆ ಇಲಾಖೆಯಿಂದ ಒದಗಿಸುವಂತೆ ಸಹಾಯಕ ಅಧೀಕ್ಷರಲ್ಲಿ ವಿನಂತಿಸಿ, ನಾಗರಿಕ ಸಮಿತಿಯು ನೀಡಿದ ಸಹಕಾರದ ವಿವರಿಸಿದರು.
ಕಛೇರಿ ಮುಂದೆ ಗ್ರಾಹಕರ ಅನುಕೂಲಕ್ಕಾಗಿ ದಾನಿಗಳಿಂದ ಅಥವಾ ಸ್ಥಳೀಯ ಸಂಘ ಸಂಸ್ಥೆಗಳ ಪ್ರಯೋಜಕತ್ವದಲ್ಲಿ ತಗಡು ಚಪ್ಪರವನ್ನು ನಿರ್ಮಿಸಲಾಗುವುದು ಎಂದರು. ಅಂಚೆ ಇಲಾಖೆಯ ಉಪ ಅಧೀಕ್ಷಕರಾದ ನವೀನ್ ರವರು ಮಾತನಾಡಿ ನಾಗರಿಕ ಸಮಿತಿಯು ನೀಡಿದ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ,ಕಛೇರಿಗೆ ಬೇಕಾಗುವ ಪಿಠೋಪಕರಣಗಳನ್ನು ಇಲಾಖೆ ಮುಖಾಂತರ ಒದಗಿಸಲಾಗುವುದು ಎಂದು ತಿಳಿಸಿದರು. ಅಂಚೆ ಮೇಲ್ವಿಚರಕರಾದ ವಾಸುದೇವ ತೊಟ್ಟಂ ರವರು ಶುಭಹಾರೈಸಿ ಜನರ ಸಹಕಾರಕಾರವನ್ನು ಶ್ಲಾಘಿಸಿದರು. ನಿವೃತ್ತ ಶಿಕ್ಷಕ, ಪತ್ರಕರ್ತರಾದ ಪುಂಡಲೀಕ ಮರಾಠೆಯವರು ನಾಗರೀಕ ಸಮಿತಿ ವತಿಯಿಂದ ನೀಡಲಾಗುವ ಅಂಚೆ ಕಛೇರಿ ತಿಂಗಳ ಬಾಡಿಗೆ ಮೊತ್ತದಲ್ಲಿ ಒಂದು ವರುಷದ ಮೊತ್ತದ ಚೆಕನ್ನು ಕಟ್ಟಡ ಮಾಲಿಕರಿಗೆ ಹಸ್ತಾಂತರಿಸಿ, ಶುಭ ಹಾರೈಸಿದರು.
ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಲ. ವಿಜಯ ಧೀರಾಜ್, ತಾ.ಪಂ ಮಾಜಿ ಸದಸ್ಯೆ ಗೀತಾ ವಾಗ್ಲೆ, ನಾಗರೀಕ ಸಮಿತಿ ಉಪಾಧ್ಯಕ್ಷ ಮಾಧವ ಕಾಮತ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ಅಂಚೆ ಪಾಲಕ ಯಮುನ ಚಿತ್ರಾಪುರ್, ಅಂಚೆ ವಿತರಕ ಚಿತ್ರಕಲಿ ಹಾಗೂ ಸಮಿತಿಯ ಉಮೇಶ್ ರಾವ್, ಡೇನಿಸ್ ಡಿಸೋಜ ಉಪಸ್ಥಿತರಿದ್ದರು.