ಸಕಾಲ ಯೋಜನೆಯಲ್ಲಿ ಉಡುಪಿ ಜಿಲ್ಲೆಗೆ ರಾಜ್ಯದಲ್ಲಿಯೇ ಮೊದಲ ಸ್ಥಾನ
Posted On:
01-07-2021 10:25PM
ಉಡುಪಿ : ಕರ್ನಾಟಕ ರಾಜ್ಯ ಸರ್ಕಾರವು 2011-12ನೇ ಸಾಲಿನಲ್ಲಿ ಜಾರಿಗೆ ತಂದಿರುವ ಸಕಾಲ ಕಾಯ್ದೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾ ಗಿದ್ದು, ಸಕಾಲ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯು ಒಟ್ಟಾರೆ ಉತ್ತಮ ಸಾಧನೆ ಮಾಡಿದೆ.
ಜನರು ಸರ್ಕಾರಿ ಕಚೇರಿಗಳಿಗೆ ಅಲೆ ದಾಡುವುದನ್ನು ತಪ್ಪಿಸಲು, ಅಕ್ರಮಕ್ಕೆ ಆಸ್ಪದ ನೀಡದಂತೆ ಹಾಗೂ ಅರ್ಜಿ ವಿಲೇ ವಾರಿ ವಿಳಂಬ ಆಗದೆ ಕಾಲಕಾಲಕ್ಕೆ ಜನ ರಿಗೆ ತಲುಪಿಸುವ ನಿಟ್ಟಿನಲ್ಲಿ ‘ಕರ್ನಾಟಕ ನಾಗರಿಕ ಸೇವಾ ಕಾಯ್ದೆ’ (ಸಕಾಲ) ಜಾರಿ ಗೊಳಿಸಲಾಯಿತು. ಅದರಂತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಅದರಡಿ ಅರ್ಜಿ ವಿಲೇವಾರಿಗೆ ಇಲಾಖೆ ಹಾಗೂ ಸೌಲಭ್ಯ ಗಳಿಗೆ ತಕ್ಕಂತೆ ಆಯಾ ಅರ್ಜಿಗಳಿಗೆ ಪ್ರತ್ಯೇಕ ಅವಧಿ ನಿಗದಿ ಮಾಡಲಾಗಿತ್ತು.
ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾರಿ ಮಾಡದಿದ್ದರೆ, ಅರ್ಜಿದಾರ ದೂರು ದಾಖಲಿಸುವ ಹಾಗೂ ಅರ್ಜಿ ವಿಳಂಬಕ್ಕೆ ಕಾರಣ ಪಡೆಯಲು ಅವಕಾಶ ಮಾಡಿ ಕೊಡಲಾಗಿದೆ. ಈ ಯೋಜನೆಯಡಿ ಸಕಾಲದಲ್ಲಿ ಸೇವೆ ಒದಗಿಸುವಲ್ಲಿ ಕರ್ತವ್ಯ ಲೋಪವೆಸಗಿದ ಸಾರ್ವಜನಿಕ ನೌಕರ ಸಕ್ಷಮ ಅಧಿಕಾರಿಯಿಂದ ದಿನಕ್ಕೆ 20ರೂ. ರಂತೆ ಗರಿಷ್ಠ 500 ರೂ.ವರೆಗೆ ದಂಡ ವಸೂಲಿ ಮಾಡಬಹುದು.
ಅರ್ಜಿ ವಿಲೇವಾರಿಗೆ ಕನಿಷ್ಠ 3 ದಿನಗಳಿಂದ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಕಾರ್ಯವನ್ನು ಜಿಲ್ಲೆಯ ಕಂದಾಯ ಇಲಾಖೆ ಮತ್ತು ಇತರ ಇಲಾಖೆ ಉತ್ತಮವಾಗಿ ನಿರ್ವಹಿಸಿದೆ.
ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿ ಯನ್ನು ನಿಗದಿತ ಅವಧಿಗೂ ಮುಂಚಿತ ವಾಗಿ ಅರ್ಜಿ ವಿಲೇವಾರಿ ಮಾಡುವುದು , ಅವಧಿ ಮೀರಿ ಅರ್ಜಿಗಳ ವಿಲೇವಾರಿ, ಅರ್ಜಿಗಳ ತಿರಸ್ಕರಿಸುವಿಕೆ ಮತ್ತು 1 ಲಕ್ಷ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಅರ್ಜಿ ಸ್ವೀಕೃತಿ ಮಾಡಿಕೊಂಡಿರುವುದು ಹೀಗೆ 4 ಅಂಶಗಳನ್ನು ಪರಿಗಣಿಸಿ ತಿಂಗಳ ಕೊನೆಯಲ್ಲಿ ರ್ಯಾಂಕ್ ನೀಡಲಾಗುತ್ತದೆ. ಅದರಂತೆ ಸಕಾಲ (ಆನ್ಲೈನ್)ದಲ್ಲಿ ಅರ್ಜಿಗಳನ್ನು ಜಿಲ್ಲೆಯ ಜನರು ಹೆಚ್ಚು ಸಲ್ಲಿಸಿದ್ದು, ಅರ್ಜಿಗಳನ್ನು ಹೆಚ್ಚು ತಿರಸ್ಕರಿಸದೆ ಅಧಿಕಾರಿಗಳು ಅವಧಿಗೂ ಮುಂಚಿತ ವಾಗಿ ಅರ್ಜಿ ವಿಲೇವಾರಿ ಮಾಡಿದ್ದಾರೆ ಇದೇ ಕಾರಣದಿಂದ ಈ ಬಾರಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ಲಭಿಸಿತು.
ಜಿಲ್ಲಾಡಳಿತದಿಂದ ಅಭಿನಂದನೆ:
ಜೂನ್ ತಿಂಗಳ ಸಕಾಲ ಸೇವೆಯಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆಯು ಪ್ರಥಮ ಸ್ಥಾನ ಪಡೆಯಲು ಕಾರಣರಾಗಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ರವರು ತಮ್ಮ ಅಧೀಕೃತ ಫೇಸ್ಬುಕ್ ಪೇಜ್ ನಲ್ಲಿ ಅಭಿನಂದನೆ ಸಲ್ಲಿಸಿರುತ್ತಾರೆ.