ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುಂದಾಪುರ : ಯುವ ಬಂಟರ ಸಂಘದ ವತಿಯಿಂದ ನಟ ರಕ್ಷಿತ್ ಶೆಟ್ಟಿ ಬಗ್ಗೆ ಅವಹೇಳನಗೈದ ಖಾಸಗಿ ಚಾನೆಲ್ ವಿರುದ್ಧ ದೂರು

Posted On: 02-07-2021 07:19PM

ಉಡುಪಿ : ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಇಂದು ಕುಂದಾಪುರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಕನ್ನಡದ ರಾಜ್ಯ ಮಟ್ಟದ ಖಾಸಗಿ ಟಿವಿಯಲ್ಲಿ ಸಿನಿಮಾ ಸಂಬಂಧಿತ ಕಾರ್ಯ ಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ ನಿಂದಿಸಿದ್ದಾರೆ. ಇದರಿಂದ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಲ್ಲಿ ಬಹಳ ಬೇಸರ ಉಂಟಾಗಿದೆ ಎಂದು ಕುಂದಾಪುರದಲ್ಲಿ ಯುವ ಬಂಟರ ಸಂಘದ ವತಿಯಿಂದ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು ಇವರ ನೇತತ್ವದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿದವರ ವಿರುದ್ಧ ಕುಂದಾಪುರ ಪೋಲಿಸ್ ಉಪಾಧೀಕ್ಷಕರ ಕಚೇರಿಯಲ್ಲಿ ದೂರನ್ನು ನೀಡಲಾಗಿದೆ.

ಈ ಸಿನಿಮಾ ಸಂಬಂಧಿತ ಕಾರ್ಯಕ್ರಮವನ್ನು ಆಯೋಜಿಸಿದವರು ಯಾರೇ ಆಗಲಿ ಅವರು ಕೂಡಲೇ ಕ್ಷಮೆ ಯಾಚಿಸಬೇಕೆಂದು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಸಂತೋಷ್ ಶೆಟ್ಟಿ, ಸದಸ್ಯರಾದ ಭರತ್ ಶೆಟ್ಟಿ, ಸಚಿನ್ ಶೆಟ್ಟಿ ವಕ್ವಾಡಿ, ರೋಶನ್ ಶೆಟ್ಟಿ, ಮಹೇಂದರ್ ಶೆಟ್ಟಿ ಉಪಸ್ಥಿತರಿದ್ದರು.