ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕೊಪ್ಪರಿಗೆ : ತುಳು ಪದಗಳ ಅರ್ಥ, ಪದಗಳನ್ನು ಸೇರಿಸಬಹುದಾದ ಆನ್ ಲೈನ್ ತುಲು ಡಿಕ್ಷನರಿ

Posted On: 03-07-2021 09:30AM

ಕಾಪು : ಒಂದು ಭಾಷೆಯ ಉಳಿಯುವಿಕೆಗೆ ಅದರ ಜ್ಞಾನ ಅತೀ ಅಗತ್ಯ. ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆಯುವುದರ ಜೊತೆಗೆ ಸ್ವಭಾಷೆಯ ಮೂಲ ಪದಗಳನ್ನು ಉಳಿಕೊಳ್ಳುವುದು ಕೂಡ ಅವಶ್ಯಕ. ಹಿಂದೆ ಅಂತರ್ಜಾಲ, ಸಾರಿಗೆ ಸಂಪರ್ಕವಿಲ್ಲದ ಕಾಲದಲ್ಲಿ ಮ್ಯಾನರ್ ಅವರು ತುಳು ನಿಘಂಟುವಿನ ರಚನೆಗೆ ಕಷ್ಟಪಟ್ಟು ಪ್ರತೀ ಮನೆ ಮನೆಗೆ ತೆರಳಿ ನಿಘಂಟನ್ನು ರಚಿಸಿರುತ್ತಾರೆ.

ಆದರೆ ಅಂದಿನಿಂದ ಇಂದಿನವರೆಗೆ 140 ವರ್ಷಗಳಲ್ಲಿ ಹೊಸ ತಂತ್ರಜ್ಞಾನದ ಉಗಮವಾದರೂ ತುಳು ಪದಕೋಶದ ಬೆಳವಣಿಗೆ ಕುಂಟಿತವಾಗಿದೆ. ಇದನ್ನು ಸರಿಪಡಿಸಲು "ಕೊಪ್ಪರಿಗೆ -ಆನ್ ಲೈನ್ ತುಲು ಡಿಕ್ಷನರಿ"ಯನ್ನು ಜೈತುಲುನಾಡ್ ಸಂಘಟನೆಯ ಮುಖೇನ ಸಿದ್ಧಪಡಿಸಿದ್ದೇವೆ.

ಇದರ ವಿಶೇಷವೇನೆಂದರೆ ಜನರೇ ತಮಗೆ ತಿಳಿದಿರುವ ಪದಗಳನ್ನು ಸೇರಿಸಬಹುದಾಗಿದೆ. ಪದಗಳ ಅರ್ಥಗಳನ್ನು ಪಂಚದ್ರಾವಿಡ ಭಾಷೆಗಳಲ್ಲಿ ತಿಳಿಯುವುದರ ಜೊತೆಗೆ ಅವುಗಳ ಭಾವಚಿತ್ರ, ಉಚ್ಚಾರ, ವೈದ್ಯಕೀಯ ಮಹತ್ವ ಹಾಗೂ ಉಪಯೋಗಗಳ ಕುರಿತು ಮಾಹಿತಿ ಲಭ್ಯವಿರುತ್ತದೆ. ಡಿಕ್ಷನರಿ ಕಾರ್ಯಕ್ಕೆ ಧನಸಹಾಯಗೈದು, ಸಲಹೆ ಸೂಚನೆ ನೀಡಿ ಸಹಕರಿಸಿದ ಎಲ್ಲಾ ಸಂಘಟನೆಯ ಸದಸ್ಯರು,ಪ್ರಮುಖರು,ಭಾಷಾಭಿಮಾನಿಗಳು, ಡಿಕ್ಷನರಿ ಅಡ್ಮಿನ್ ತಂಡ ಹಾಗೂ ಡಿಕ್ಷನರಿ ಡೇಟಾ ತಂಡಕ್ಕೆ ಧನ್ಯವಾದಗಳು ಎಂದು ಜೈ ತುಲುನಾಡ್ (ರಿ.) ಬೆಂಗಳೂರು ಘಟಕದ ಉಪಾಧ್ಯಕ್ಷರು ಮತ್ತು ಡಿಕ್ಷನರಿ ಡೆವೆಲಪರ್ ಸುಮಂತ್ ಪೂಜಾರಿ ಹೆಬ್ರಿ ತಿಳಿಸಿದ್ದಾರೆ.