92ನೇ ಹೇರೂರು : ಕಂಡಡೊಂಜಿ ದಿನ ಕಾರ್ಯಕ್ರಮ
Posted On:
04-07-2021 03:36PM
ಕಾಪು : ವಿಕಾಸ ಸೇವಾ ಸಮಿತಿ ಮತ್ತು ಮಹಿಳಾ ಬಳಗ 92ನೇ ಹೇರೂರು ಹಾಗೂ ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗ, ಶಿರ್ವ ಇದರ ಸಂಯುಕ್ತ ಆಶ್ರಯದಲ್ಲಿ ಕಂಡಡೊಂಜಿ ದಿನ ಕಾರ್ಯಕ್ರಮ 92ನೇ ಹೇರೂರು ಶ್ರೀ ಬಡ್ದು ಶೆಟ್ರ ಕೃಷಿ ಭೂಮಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹೇರೂರುನ ಹಿರಿಯ ಕೃಷಿಕರಾದ ಶ್ರೀ ಬಡ್ದು ಶೆಟ್ಟಿ, ಹಿರಿಯ ನಾಟಿ ವೃತ್ತಿಯನ್ನು ಮಾಡುತಿದ್ದ ಶ್ರೀಮತಿ ಜಯಂತಿ ದಾಮೋದರ ಆಚಾರ್ಯ, ಕಲ್ಲುಗುಡ್ಡೆ ಇವರನ್ನು ಅಭಿನಂದಿಸಲಾಯಿತು.
ಕೃಷಿಕರಾದ ಶ್ರೀ ವಿಜಯ ಶೆಟ್ಟಿ, ಶ್ರೀಮತಿ ರೇಣುಕಾ ಶೆಟ್ಟಿ ಮಾರ್ಗದರ್ಶನ ನೀಡಿದರು. ಯುವ ಸಂಗಮದ ಅಧ್ಯಕ್ಷ ಉಮೇಶ್ ಆಚಾರ್ಯ ಸಂಧರ್ಬೋಚಿತವಾಗಿ ಮಾತನಾಡಿದರು. ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ.
ವಿಕಾಸ ಸೇವಾ ಸಮಿತಿ ಮಹಿಳಾ ಬಳಗದ ಅಧ್ಯಕ್ಷೆ ಶ್ರೀಮತಿ ವಿಜಯ ವಿಘ್ನೇಶ್ ಆಚಾರ್ಯ, ಹೇರೂರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಮಂಜುಳಾ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ವಿಕಾಸ ಸೇವಾ ಸಮಿತಿ ಅಧ್ಯಕ್ಷ ಮಾಧವ ಆಚಾರ್ಯ ಕಾರ್ಯಕ್ರಮ ಸಂಘಟಿಸಿದ್ದರು.