ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 92 ಹೇರೂರು ಒಕ್ಕೂಟ, ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ 92 ಹೇರೂರು, ಲಯನ್ಸ್ ಕ್ಲಬ್ ಬಿಸಿರೋಡ್ ಬಂಟಕಲ್ಲು,
ನಾಗರಿಕ ಸೇವಾ ಸಮಿತಿ ಬಂಟಕಲ್ಲು
ಇವರ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಸಭಾಂಗಣದಲ್ಲಿ ವನಮಹೋತ್ಸವ ಮತ್ತು ನೇಜಿ ವಿತರಣಾ ಸಮಾರಂಭ ನಡೆಯಿತು.
ಹೇರೂರಿನ ಹಿರಿಯ ಕೃಷಿಕರಾದ ವಿಜಯ ಶೆಟ್ಟಿ ಸಾನದ ಮನೆ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ರವರು ಅಧ್ಯಕ್ಷತೆ ವಹಿಸಿದ್ದರು,
ತೆನೆ ಕಟ್ಟುವ ಹಬ್ಬದಂದು ತೆನೆ ಕಟ್ಟುವುದಕ್ಕಾಗಿ ತಮ್ಮ ಮನೆಯಲ್ಲಿಯೇ ಭತ್ತದ ಸಸಿಗಳನ್ನು ನಾಟಿ ಮಾಡಲು ಎಲ್ಲರಿಗೂ ಭತ್ತದ ಸಸಿ /ನೇಜಿ/ವಿತರಿಸುತ್ತಿರುವ ಈ ಒಂದು ವಿಶೇಷ ಕಾರ್ಯಕ್ರಮ ಇದಾಗಿದ್ದು ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಕ್ಕಾಗಿ ಎಲ್ಲಾ ಸಂಸ್ಥೆಗಳಿಗೆ ಕೆಆರ್ ಪಾಟ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಒಕ್ಕೂಟದ ಅಧ್ಯಕ್ಷರಾದ ದಿನೇಶ್ ದೇವಾಡಿಗ ರವರು ವನಮಹೋತ್ಸವದ ಬಗ್ಗೆ ಮಾಹಿತಿ ನೀಡಿ ಇಂದು ನೇಜಿ ವಿತರಿಸಲು ಸಹಕಾರ ನೀಡಿದ ಕೃಷಿಕರಾದ ವಿಜಯ ಶೆಟ್ಟಿ ಇವರಿಗೆ ಕೃತಜ್ಞತೆ ಸಲ್ಲಿಸಿದರು.
35 ವರ್ಷಗಳಿಂದ ಸಮಾಜಸೇವೆ ಯೊಂದಿಗೆ ಕೃಷಿಯಲ್ಲಿ ತೊಡಗಿಕೊಂಡಿರುವ ವಿಜಯ ಶೆಟ್ಟಿ ಸಾನದ ಮನೆ ಇವರನ್ನು ಎಲ್ಲಾ ಸಂಘಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು.
ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ನಾರಾಯಣ ಪೂಜಾರಿ ಬಂಟಕಲ್ಲು, ಬಿಸಿರೋಡು ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಜಯ ದೀರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ವಸಂತಿ ಆಚಾರ್ಯ, ಶ್ರೀಧರ್ ಕಾಮತ್, ಅನಿಲ್ ಶೆಟ್ಟಿ, ಮಂಜುಳಾ ಆಚಾರ್ಯ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾದ ಶಶಿಕಲಾ ದೇವಾಡಿಗ, ಕಾರ್ಯದರ್ಶಿ ಪವಿತ್ರ ರಾವ್, ಉಮೇಶ್ ರಾವ್, ಶಂಕರ ದೇವಾಡಿಗ, ಅಂಗನವಾಡಿ ಟೀಚರ್ ಬಬಿತಾ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಸುಕನ್ಯಾ ಜೋಗಿ ಪ್ರಾರ್ಥಿಸಿ, ವಸಂತಿ ಆಚಾರ್ಯ ಸ್ವಾಗತಿಸಿ, ಮಾಲತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪೂರ್ಣಿಮಾ ಆಚಾರ್ಯ ವಂದಿಸಿದರು.