ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಒಂದು ವರ್ಷ ಪೂರೈಸಿ, ಪ್ರತಿಭೆಗಳ ಪರಿಚಯದೊಂದಿಗೆ ಬಡಕುಟುಂಬಗಳಿಗೆ ಸಹಾಯ ನೀಡುತ್ತಿರುವ ಬಿಲ್ಲವ ವಾರಿಯಸ್೯ ತಂಡ

Posted On: 06-07-2021 08:50PM

ಬಿಲ್ಲವ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸಿ ಮುಂದಕ್ಕೆ ಅವರಿಗೊಂದು ಉತ್ತಮವಾದ ಭವಿಷ್ಯವನ್ನು ರೂಪಿಸಿ ಕೊಡುವ ಸಲುವಾಗಿ 30 ಜೂನ್ 2020 ರಂದು 'ಬಿಲ್ಲವ ವಾರಿಯರ್ಸ್‌' ಎಂಬ ಅಡ್ಮಿನ್ ತಂಡವನ್ನು ಪ್ರವೀಣ್ ಪೂಜಾರಿ, ಪುಷ್ಪ ರಾಜ್ ಪೂಜಾರಿ ಹಾಗೂ ದಯಾನಂದ್ ಕುಕ್ಕಾಜೆ, ಸಾಯಿ ದೀಕ್ಷಿತ್ ಇವರ ಜಂಟಿ ಆಶ್ರಯದಲ್ಲಿ ಉದ್ಘಾಟಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಗ್ರೂಪ್ ,ಫೇಸ್ಬುಕ್, ಇನ್ಸ್ಟಾಗ್ರಾಮ್ , ಯೂಟ್ಯೂಬ್ ಹೀಗೆ ಅಂತರ್ಜಾಲದಲ್ಲಿ ಮುತ್ತಿನಂಥ ಪದಗಳನ್ನು ಪೋಣಿಸಿ ಬರವಣಿಗೆ ಎಂಬ ಹಾರವನ್ನು ತಯಾರಿಸಿ ಅದೆಷ್ಟೋ ಬಿಲ್ಲವ ಪ್ರತಿಭೆಗಳನ್ನು 'ಬಿಲ್ಲವ ವಾರಿಯರ್ಸ್‌' ತಂಡದ ಸದಸ್ಯರು ಪರಿಚಯಿಸಿರುವರು.

ಮನುಜನ ಮನದಲ್ಲಿ ಮನೆ ಮಾಡುವುದು ಮನೆಗಳನ್ನು ಕಟ್ಟಿದಷ್ಟು ಸುಲಭವಲ್ಲ. ಅಂತಹ ಸಂದರ್ಭದಲ್ಲಿ ಒಂದೇ ವರುಷದಲ್ಲಿ 15,000 ಕ್ಕಿಂತಲೂ ಜಾಸ್ತಿ ಹಿಂಬಾಲಕರನ್ನು ಪಡೆದಿದೆ ಎಂಬುವುದು ಈ ತಂಡದ ಗರಿಮೆ ಹೆಚ್ಚಿಸುವಂತಹ ವಿಚಾರ. ಇದೇ ಏಪ್ರಿಲ್ 22 ರಂದು ತಂಡದ ಅಡ್ಮಿನ್ರಲ್ಲೊಬ್ಬರಾದ ಪ್ರವೀಣ್ ಪೂಜಾರಿ ಇವರ ಹುಟ್ಟುಹಬ್ಬದ ಪರವಾಗಿ ನೊಂದ ಕುಟುಂಬಕ್ಕೊಂದು ವೈದ್ಯಕೀಯ ವೆಚ್ಚಕ್ಕೆ ಧನಸಹಾಯವನ್ನು ಈ ತಂಡವು ಮಾಡಿರುತ್ತದೆ.

ಒಂದನೇ ವರುಷವನ್ನು ಪೂರೈಸಿದ ಸಂಭ್ರಮದಲ್ಲಿರುವ ಬಿಲ್ಲವ ವಾರಿಯರ್ಸ್ ತಂಡವು ಬಡ ಕುಟುಂಬಗಳಿಗೆ , ತಂಡದ ಮೊದಲನೇ ವಾರ್ಷಿಕೋತ್ಸವದ ಸಲುವಾಗಿ ಆಹಾರ ಕಿಟ್ ಗಳನ್ನು ಸಹ ಸೌದಿ ಅರೇಬಿಯಾದ ಉದ್ಯಮಿ ಸತೀಶ್ ಕುಮಾರ್ ಬಜಾಲ್ ಇವರ ಪ್ರೋತ್ಸಾಹ ನೀಡಿದ್ದಾರೆ. ಜನರ ವಿರೋಧವಿದ್ದರೂ ಯಾವುದಕ್ಕೂ ಹಿಂದೆ ಸರಿಯದೆ ಧೈರ್ಯದಿಂದ ಹೆಜ್ಜೆ ಹಾಕಿ , ದೇಶ-ವಿದೇಶಗಳಲ್ಲಿ ಜನಮನ್ನಣೆ ಪಡೆದು ಇವತ್ತಿಗೆ ಒಂದು ವರುಷ ಪೂರ್ಣಗೊಂಡಿದೆ.

ನಾರಾಯಣಗುರುಗಳ ಆಶೀರ್ವಾದ, ಕೋಟಿಚೆನ್ನಯರ ಅನುಗ್ರಹದಿಂದ ಇನ್ನಷ್ಟು ನೊಂದ ಕುಟುಂಬಗಳಿಗೆ ಆಸರೆಯಾಗಿ, ಉದಯೋನ್ಮುಖ ಪ್ರತಿಭೆಗಳಿಗೆ‌ ಪ್ರೋತ್ಸಾಹ ನೀಡುತ್ತಿದೆ. 'ಬಿಲ್ಲವ ವಾರಿಯರ್ಸ್‌' ತಂಡದಿಂದ ಮತ್ತಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ.