ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನನ್ನ ಸಮುದಾಯದ ಬಗ್ಗೆ ಗೌರವವಿದೆ, ಇಲ್ಲ ಸಲ್ಲದ ಆರೋಪಕ್ಕೆ ಕಾನೂನು ಹೋರಾಟಕ್ಕೂ ಸಿದ್ಧ : ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ

Posted On: 15-07-2021 10:37PM

ಕುಂದಾಪುರ : ಶ್ರೀಮಹಾಕಾಳಿ ದೇವಸ್ಥಾನ ಮತ್ತು ವಿದ್ಯಾರಂಗ ಮಿತ್ರ ಮಂಡಳಿ (ರಿ) ಕುಂದಾಪುರ ಇದರ ಪತ್ರಿಕಾಗೋಷ್ಠಿಯಲ್ಲಿ ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದ್ದು, ಎಲ್ಲವೂ ಸತ್ಯಕ್ಕೆ ದೂರವಾದ ಸಂಗತಿ ಮತ್ತೊಮ್ಮೆ ನನ್ನ ತೇಜೋವಧೆ ಮಾಡುವ ಪ್ರಯತ್ನ ಇದಾಗಿದೆ. ನಾನು ಎಲ್ಲಿಯೂ ನನ್ನ ಸಮುದಾಯದ ವಿರುದ್ದ ಅವಹೇಳನವಾಗಲಿ, ಕೀಳಾಗಿ ಮಾತಾಡಿಲ್ಲ ಯಾವುದೇ ಮಾಧ್ಯಮದಲ್ಲಿ ಸಮೂದಾಯದ ವಿರುದ್ದ ಹೇಳಿಕ ನೀಡಿಲ್ಲ. ಎಂದು ಹರ್ಕ್ಯುಲೆಸ್ ಜಿಮ್ ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಹೇಳಿದರು.

ವಿಪರ್ಯಾಸವೇನೆಂದರೆ ವೈಯಕ್ತಿಕ ವಿಷಯವನ್ನು ಸಮುದಾಯ ವಿಷಯವಾಗಿ ತಿರುಚುತ್ತಿರುವುದು ಸರಿಯಲ್ಲ, ನನ್ನ ಹಿಂದೆ ಯಾವುದೊ ಕಾಣದ ಕೈಗಳಿಂದ ದೊಡ್ಡ ಷಡ್ಯಂತರ ನಡೆಯುತ್ತಿದೆ.ನಾನು ನ್ಯಾಯಲಯದಲ್ಲಿ 4 ಜನರ ವಿರುದ್ಧ ದಾವೆ ಹೂಡಿರುವುದೇ ಹೊರತು, ನನ್ನ ಖಾರ್ವಿ ಸಮುದಾಯದ ಸಂಘ, ಸಂಸ್ಥೆಗಳ ಮೇಲೆ ಅಲ್ಲ ನಾನು ಎಲ್ಲಿಯೂ ನನ್ನ ಸಮೂದಾಯದ ವಿರುದ್ದ ಅವಹೇಳನವಾಗಲಿ, ಕೀಳಾಗಿ ಮಾತಾಡಿಲ್ಲ ಯಾವುದೇ ಮಾಧ್ಯಮದಲ್ಲಿ ಸಮೂದಾಯದ ವಿರುದ್ದ ಹೇಳಿಕೆ ನೀಡಿಲ್ಲ.

ನಾನು ಮಾಡಿದ ಸಾಧನೆಯನ್ನು ಅಪಪ್ರಚಾರ ಮಾಡಿದ ವ್ಯಕ್ತಿಗಳ ಮೇಲೆ ದೂರು ದಾಖಲಿಸಿದ್ದೇನೆ. ಹೊರತು ಸಮುದಾಯದ ಮೇಲೆ ಯಾವುದೇ ಆರೋಪ ಮಾಡಿಲ್ಲ. ಕಜಕಿಸ್ತಾನದಲ್ಲಿ ನಾನು ಚಿನ್ನದ ಪದಕ ಗೆದ್ದು ಮೊದಲ ಸ್ಥಾನ ಪಡೆದ್ದನ್ನು 5ನೇ ಸ್ಥಾನ ಎಂದು ತಿದ್ದಿ ವಾಟ್ಸಪ್ನಲ್ಲಿ ಹರಿದು ಬಿಟ್ಟಿರುವವರ ವಿರುದ್ದ ದೂರು ದಾಖಲಿಸಿದ್ದೇನೆ. ಅದರ ಸಾಕ್ಷಿಯನ್ನು ಈಗಾಗಲೇ ನ್ಯಾಯಾಲಯದಲ್ಲಿ ನೀಡಿರುತ್ತೇನೆ. ಎಲ್ಲಾ ದಾಖಲೆ ಪರಿಶೀಲಿಸಿದ ಮೇಲೆ ಆರೋಪಿಗಳ ವಿರುದ್ಧ ಕೇಸು ದಾಖಲಿಸಲು ನ್ಯಾಯಾಲಯ ಆದೇಶಿಸಿದೆ.

ಇನ್ನು ನಾನು ಕಜಕಿಸ್ತಾನಕ್ಕೆ ಹೋಗುವಾಗ ಹಣದ ಬೇಡಿಕೆ ಇಟ್ಟಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ ಇದು ಸತ್ಯಕ್ಕೆ ದೂರವಾದ ಮಾತು.ಒಬ್ಬ ಅಂತಾರಾಷ್ಟ್ರೀಯ ಕ್ರೀಡಾಪಟು ವಿದೇಶಕ್ಕೆ ಹೋಗುವಾಗ ತನ್ನ ಸಮುದಾಯದಲ್ಲಿ ಮತ್ತು ಸಂಘ ಸಂಸ್ಥೆಯಲ್ಲಿ ಪ್ರೋತ್ಸಾಹ, ಸಹಕಾರ, ಬೆಂಬಲ ಕೇಳುವುದು ಸಹಜ. ಹಾಗೆ ನಾನು ಮನವಿ ಮಾಡಿದ್ದು ನಿಜ. ಆದ್ರೆ ನಾನು ಎಲ್ಲೂ ಹಣಕ್ಕೆ ಪಟ್ಟು ಹಿಡಿಯಲಿಲ್ಲ ಅಲ್ಲದೆ ಹಣ ಕೊಡಲೇ ಬೇಕು ಅಂತ ಯಾವತ್ತೂ ಹೇಳಲಿಲ್ಲ. ನಾನು ಗೆದ್ದು ಬಂದ ನಂತರ ರೂ. 5 ಸಾವಿರ ಚೆಕ್ ನ್ನು ವಿದ್ಯಾರಂಗ ಮಿತ್ರ ಮಂಡಳಿಯವರು ಕೊಟ್ಟಿದ್ದಾರೆ. ಆ ಚೆಕ್ ನ್ನು ಎಲ್ಲರ ಸಮ್ಮುಖದಲ್ಲಿ ವಾಪಸು ನೀಡಿದ್ದೇನೆ. ನನಗೆ ನನ್ನ ಕೊಂಕಣ ಖಾರ್ವಿ ಸಮುದಾಯದ ಬಗ್ಗೆ ಅಪಾರವಾದ ಗೌರವವಿದೆ. ನಾನು ಕೊಂಕಣ ಖಾರ್ವಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತೇನೆ. ನಾನು ಹುಟ್ಟಿದ್ದು ಕೊಂಕಣ ಖಾರ್ವಿ ಸಮುದಾಯದಲ್ಲಿ ಸಾಯೂವುದು ಕೊಂಕಣ ಖಾರ್ವಿ ಸಮುದಾಯದಲ್ಲಿಯೇ. ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ನನ್ನ ಹೋರಾಟ ಏನೇ ಇದ್ದರೂ ಅದು ನಾಲ್ಕು ವ್ಯಕ್ತಿಗಳ ವಿರುದ್ದವೇ ಹೊರತು ಸಮುದಾಯದ ವಿರುದ್ದವಲ್ಲ. ಆದರೆ ಇಲ್ಲಿ ವೈಯಕ್ತಿಕ ವಿಚಾರವನ್ನು ಸಮುದಾಯದ ವಿಚಾರ ವೆಂದು ತಿರುಚುವುದು ಸರಿಯಲ್ಲ. ನಾನು ಈ ನಾಲ್ಕು ವ್ಯಕ್ತಿಗಳ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇನೆ. ಇವರು ಸಹ ವೈಯಕ್ತಿಕ ವಿಷಯವನ್ನು ಮುಚ್ಚಿ ಹಾಕಲು ಸಮುದಾಯವನ್ನು ಬಳಸಿಕೊಳ್ಳುವುದು ಬಿಟ್ಟು ಕಾನೂನು ಹೋರಾಟ ನಡೆಸಲಿ ಎಂದು ಸತೀಶ್ ಖಾರ್ವಿ ಹೇಳಿದರು.