ಕಾಪು : ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ ನಜರತ್ ರವರ ಹೆತ್ತವರಾದ ಹಳೆಹಿತ್ಲು ದಿ| ಫೇಬಿಯನ್ ಸಬೆಸ್ಟಿಯನ್ ನಜರತ್ ಮತ್ತು ದಿ| ಸಬೀನಾ ನಜರತ್ ನೆನಪಿಗಾಗಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಟಪಾಡಿ-ಶಿರ್ವ ಮುಖ್ಯರಸ್ತೆಯ ಮಟ್ಟಾರು - ಅಟ್ಟಿಂಜ ಕ್ರಾಸ್ ಬಳಿ ನಿರ್ಮಿಸಿದ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಯವರು ಭೇಟಿ ನೀಡಿದರು.
ಈ ಸಂದರ್ಭ ಮಾತನಾಡಿದ ಶ್ರೀಗಳು ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ನಾರಾಯಣ ಗುರುಗಳ ತತ್ವ ಆದರ್ಶದಂತೆ ಈ ಸಾನಿಧ್ಯವು ಕ್ರೈಸ್ತ ಸಮುದಾಯದ ಭಕ್ತನಿಂದ ನಿರ್ಮಾಣವಾಗಿರುವುದು ಒಂದು ನಿದರ್ಶನವಾಗಲಿದೆ ಎಂದರು.