ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಂಕರಪುರ : ಸೈಂಟ್ ಜೋನ್ಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಡೊಮಿಯನ್ ಆರ್. ನೊರೊನ್ನರಿಗೆ ಬೀಳ್ಕೊಡುಗೆ, ಸನ್ಮಾನ

Posted On: 16-07-2021 02:25PM

ಶಿರ್ವ : ಸೈಂಟ್ ಜೋನ್ಸ್ ಪ್ರೌಢ ಶಾಲೆ ಶಂಕರಪುರ ಇಲ್ಲಿ 39 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ 2021, ಎಪ್ರಿಲ್ 30 ರಂದು ವಯೋನಿವೃತ್ತಿ ಹೊಂದಿದ ಡೊಮಿಯನ್ ಆರ್. ನೊರೊನ್ನ ಇವರನ್ನು ಸೈಂಟ್ ಜೋನ್ಸ್ ಶಾಲಾ ಆಡಳಿತ ಮಂಡಳಿ, ಪ್ರೌಢ ಶಾಲಾ ಶಿಕ್ಷಕ ಮತ್ತು ಸಿಬ್ಬಂದಿ ಹಾಗೂ ಸೈಂಟ್ ಜೋನ್ಸ್ ಶಾಲಾ ಹಳೆ ವಿದ್ಯಾರ್ಥಿ ಸಂಘ ಜಂಟಿಯಾಗಿ ಚರ್ಚಿನ ಸಮುದಾಯ ಭವನದಲ್ಲಿ ಸನ್ಮಾನಿಸಲಾಯಿತು.

ನಿವೃತ್ತ ಶಿಕ್ಷಕರ ಬಗ್ಗೆ ಶಾಲಾ ಹಳೆ ವಿದ್ಯಾರ್ಥಿ ಶ್ರೀ ವಾಲ್ಟ್ಸನ್ ಡೇಸಾರವರು ಗುಣಗಾನ ಮಾಡಿದರು. ಹಾಗೆಯೇ ಪ್ರೌಢ ಶಾಲಾ ಸಹಶಿಕ್ಷಕಿ ಸುನೀತ ಲೀನಾ ಡಿ'ಸೋಜರವರು ಹಾಗೂ 10ನೇ ತರಗತಿಯ ವಿದ್ಯಾರ್ಥಿನಿ ಕು. ಶ್ರೇಯ ಮಾತನಾಡಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ಮೋಹನ್‌ದಾಸ್ ಆರ್. ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಶಾಲಾ ಸಂಚಾಲಕರಾದ ರೆ.ಫಾ. ಫರ್ಡಿನಾಂಡ್ ಗೋನ್ಸಾಲ್ವಿಸ್‌ರವರು ಶಾಲು ಹೊದಿಸಿ ಸನ್ಮಾನಿಸಿದರು. ವೇದಿಕೆಯಲ್ಲಿ ಚರ್ಚಿನ ಆಡಳಿತ ಮ೦ಡಳಿಯ ಕಾರ್ಯದರ್ಶಿ ಅನಿತ ಡಿ'ಸೋಜ, ಚರ್ಚಿನ ಸಹಾಯಕ ಧರ್ಮಗುರುಗಳಾದ ರೆ.ಫಾ. ಅನಿಲ್ ಪಿಂಟೊ, ಮೌಂಟ್ ರೋಜರಿ ಚರ್ಚ್ ಕಲ್ಯಾಣಪುರದ ಧರ್ಮಗುರುಗಳಾದ ರೆ.ಫಾ. ಲೆಸ್ಲಿ ಡಿ'ಸೋಜ ಮತ್ತು ಮೂರು ಸಂಸ್ಥೆಗಳ ಮುಖ್ಯಸ್ಥರು ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಚರ್ಚಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೋನ್ ರೋಡ್ರಿಗಸ್ ಸ್ವಾಗತಿಸಿ, ಪ್ರೌಢ ಶಾಲಾ ಮುಖ್ಯಸ್ಥರಾದ ಅಶ್ವಿನ್ ರೊಡ್ರಿಗಸ್ ವಂದಿಸಿ, ಶಿಕ್ಷಕಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.