ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವ : ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಭೇಟಿ

Posted On: 17-07-2021 01:38PM

ಕಾಪು : ಜಗದ್ಗುರು ಬ್ರಹ್ಮ ಶ್ರೀ ನಾರಾಯಣಗುರುಗಳ ಶಿವಗಿರಿ ಮಠದ ಸನ್ಯಾಸಿಗಳಾದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಇಂದು ಶಿರ್ವದ ಚೆಕ್ ಪಾದೆ ಬಳಿ ಇರುವ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರಕ್ಕೆ ದಿವ್ಯ ದರ್ಶನವಿತ್ತರು.

ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಭವಿಷ್ಯದ ಅಭಿವೃದ್ಧಿಗೆ ಇವರ ಮಾರ್ಗದರ್ಶನ ಹಾಗೂ ಭವಿಷ್ಯದಲ್ಲಿ ಶಿರ್ವದಲ್ಲಿ ಹೊಸ ಧಾರ್ಮಿಕ ಇತಿಹಾಸ ಸೃಷ್ಟಿಸುವ ಬಗ್ಗೆ ಸಂಕಲ್ಪವಿತ್ತು ಆಶೀರ್ವಚನ ನೀಡಿದರು.

ಬಿಲ್ಲವ ಸಮಾಜವನ್ನು ಧಾರ್ಮಿಕ, ಶೈಕ್ಷಣಿಕ, ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಗೊಳಿಸುವ ಉದ್ದೇಶದೊಂದಿಗೆ ಮತ್ತು ಶಿರ್ವದಲ್ಲಿ ಬಿಲ್ಲವ ಸಮಾಜವನ್ನು ಒಗ್ಗಟ್ಟು ಗೊಳಿಸಿ ನಾರಾಯಣ ಗುರುಗಳ ತತ್ವ ಆದರ್ಶ ಸಿದ್ಧಾಂತವನ್ನು ಎಲ್ಲರೂ ಅನುಸರಿಸಲು ಪ್ರೇರಣೆ ನೀಡುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರೂ ಮಾರ್ಗದರ್ಶಕರೂ ಆದ ಹೆಜಮಾಡಿ ಮಹೇಶ್ ಶಾಂತಿ, ಕಳತೂರ್ ಗರಡಿ ಅರ್ಚಕರಾದ ವಿಶ್ವನಾಥ್ ಅಮೀನ್, ಗೌರವ ಅಧ್ಯಕ್ಷರಾದ ದಿನೇಶ್ ಸುವರ್ಣ, ಸ್ಥಳ ದಾನವನ್ನು ನೀಡಿರುವ ಶ್ರೀ ರತ್ನಾಕರ ಕುಕ್ಯಾನ್ ಚೆಕ್ ಪಾದೆ, ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಪೂಜಾರಿ ಮತ್ತು ಸಮಿತಿ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.