ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವ : ಪಂಚಾಯತ್ ಗ್ರಾಮಸಭೆಗೆ ಇದೇ ಮೊದಲ ಬಾರಿಗೆ ಗ್ರಾಮಸ್ಥರಿಗೆ ಆನ್ ಲೈನ್ ಮೂಲಕ ಭಾಗವಹಿಸುವ ಅವಕಾಶ

Posted On: 18-07-2021 12:31PM

ಕಾಪು : ಪಂಚಾಯತ್ ರಾಜ್ ವ್ಯವಸ್ಥೆಯಡಿ ರಾಜ್ಯದಲ್ಲೆ ಪ್ರಥಮ ಎಂಬಂತೆ ಗ್ರಾಮ ಸಭೆಯ ನೇರ ಪ್ರಸಾರ - ದೇಶ ವಿದೇಶದಲ್ಲಿರುವ ಗ್ರಾಮಸ್ಥರಿಗೆ ಗ್ರಾಮ ಸಭೆಯನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮ ಪಂಚಾಯತ್ ನ 2021-22 ಸಾಲಿನ ಪ್ರಥಮ ಗ್ರಾಮ ಸಭೆಯು ದಿನಾಂಕ 19.07.2021 ರ ಸೋಮವಾರದಂದು ಬೆಳಿಗ್ಗೆ 10.30 ಕ್ಕೆ ಶಿರ್ವ ಸಾರ್ವಜನಿಕ ಗಣೇಶೋತ್ಸವ ವೇದಿಕೆಯ ಸಮೀಪದ ಮಹಿಳಾ ಸೌಧದಲ್ಲಿ ನಡೆಯಲಿದೆ.

ಈ ಗ್ರಾಮ ಸಭೆಯಲ್ಲಿ ಭಾಗವಹಿಸಲು ಎಲ್ಲ ಗ್ರಾಮಸ್ಥರಿಗೆ ಆಮಂತ್ರಣವಿದ್ದು, ಈ ಸಂಪೂರ್ಣ ಸಭೆಯನ್ನು ತಮ್ಮ ಮನೆಗಳಿಂದಲೂ ವೀಕ್ಷಿಸುವ ಅವಕಾಶವನ್ನು ಶಿರ್ವ ಪಂಚಾಯತ್ ವತಿಯಿಂದ ಏರ್ಪಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಒಂದು ಪಂಚಾಯತ್ ಗ್ರಾಮ ಸಭೆಯನ್ನು ಆನ್ ಲೈನ್ ಮೂಲಕ ನೇರ ಪ್ರಸಾರ ಮಾಡಲು ಶಿರ್ವ ಪಂಚಾಯತ್ ಮುಂದಾಗಿದೆ.

ಈ ವಿಷಯದ ಮೇಲೆ ಮಾತನಾಡಿದ ಶಿರ್ವ ಪಂಚಾಯತ್ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ನಮ್ಮ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲ ಗ್ರಾಮಸ್ಥರ ಸಲಹೆ ಸೂಚನೆಗಳು ಮಹತ್ವದ್ದು. ನಾವು ಮಾಡಿದ ವಿವಿಧ ಯೋಜನೆಗಳ ಮಾಹಿತಿ ನಮ್ಮ ಗ್ರಾಮಸ್ಥರಿಗೆ ನೀಡುವುದು ನಮ್ಮ ಕರ್ತವ್ಯ. ಕೊರೊನಾ ಮಹಾಮಾರಿಯ ಭಯ ಹಾಗೂ ನಿರಂತರ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಬಹಳಷ್ಟು ಜನರು ಈ ಗ್ರಾಮ ಸಭೆಯಲ್ಲಿ ಸಭೆಯಲ್ಲಿ ಭಾಗವಹಿಸಲು ಹಿಂಜರಿಯುವುದು ಸಹಜ. ಆದ್ದರಿಂದ ಅವರಿಗೆ ತಮ್ಮ ಮನೆಯಲ್ಲೇ ಕೂತು ಗ್ರಾಮ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಡುವುದೇ ಈ ನೇರಪ್ರಸಾರದ ಉದ್ದೇಶ. ಈ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಇಲಾಖಾ ಮಾಹಿತಿಯನ್ನು ನೀಡಲಿದ್ದಾರೆ. ಇದು ನಮ್ಮ ಗ್ರಾಮಸ್ಥರಿಗೆ ತಿಳಿಯುವುದು ಬಹುಮುಖ್ಯ ಎಂದರು. ಗ್ರಾಮಸಭೆಗೆ ವೈಯಕ್ತಿಕವಾಗಿ ಹಾಜರಾಗಲು ಇಚ್ಛಿಸುವ ಗ್ರಾಮಸ್ಥರಿಗೂ ಕೂಡ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಭಾಗವಹಿಸುವ ಎಲ್ಲ ಗ್ರಾಮಸ್ಥರಿಗೆ ಉಚಿತ ಮಾಸ್ಕ್ ವಿತರಣೆ ನಡೆಯಲಿದ್ದು , ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಮೂಲಕ ವಿನಂತಿ ಮಾಡಲಾಗಿದೆ ಎಂದು ಅಭಿವೃದ್ದಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ತಿಳಿಸಿದರು.

ಶಿರ್ವ ಪಂಚಾಯತಿಯ ಗ್ರಾಮ ಸಭೆಯನ್ನು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು. https://tinyurl.com/ShirvaGramaSabhe ಈ ಗ್ರಾಮಸಭೆಯಲ್ಲಿ ಗ್ರಾಮಸ್ಥರು ವೈಯಕ್ತಿಕವಾಗಿ ಅಥವಾ ಆನ್ ಲೈನ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಗ್ರಾಮದ ಅಭಿವೃದ್ಧಿಯ ನಿಟ್ಟಿನಿಂದ ತಮ್ಮ ಸಲಹೆ , ಸೂಚನೆಗಳ್ಳನ್ನು ನೀಡಬೇಕೆಂದು ಶಿರ್ವ ಪಂಚಾಯತಿ ಅಧ್ಯಕ್ಷರು , ಅಭಿವೃದ್ಧಿ ಅಧಿಕಾರಿ, ಸದಸ್ಯರು ಮತ್ತು ಸಿಬ್ಬಂಧಿ ವರ್ಗದವರು ಗ್ರಾಮಸ್ಥರಲ್ಲಿ ವಿನಂತಿಸಿದ್ದಾರೆ.