ಕಲ್ಯಾಣಪುರ : ವಾಯುಸೇನೆಯ ನಿವೃತ್ತ ಯೋಧ ಪದ್ಮನಾಭ ಶೇರಿಗಾರ್ ಕೊಡವೂರುಗೆ ಗೌರವ
Posted On:
26-07-2021 10:25PM
ಉಡುಪಿ : ಕಾರ್ಗಿಲ್ ವಿಜಯ ದಿನದ ಪ್ರಯುಕ್ತ
ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ವಾಯು ಸೇನೆಯ ನಿವೃತ್ತ ಯೋಧ ಪದ್ಮನಾಭ ಶೇರಿಗಾರ್, ಕೊಡವೂರು ಅವರಿಗೆ ಗೌರವ ಸಮರ್ಪಿಸಲಾಯಿತು.
ಮುಖ್ಯ ಅತಿಥಿಯಾಗಿ ಕೊಡವೂರು ಸಿ ಎ ಬ್ಯಾಂಕ್ ಅಧ್ಯಕ್ಷರಾದ ನಾರಾಯಣ ಬಲ್ಲಾಳ್, ರೋಟರಿ ಕ್ಲಬ್ ನ ಅಧ್ಯಕ್ಷ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್ , ರೋಟರಿ ಕ್ಲಬ್ ನ ವೃತ್ತಿ ಸೇವೆ ನಿರ್ದೇಶಕರು ಶಂಕರ ಸುವರ್ಣ, ಮಾಜಿ ಸಹಾಯಕ ಗವರ್ನರ್ ಎಮ್. ಮಹೇಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಮ ಪೂಜಾರಿ, ಆನಂದ್ ಶೆಟ್ಟಿ, ವಿಜಯ ಮಾಯಡಿ, ಮಾಜಿ ಕಾರ್ಯದರ್ಶಿ ರಾಮಕೃಷ್ಣ ಉಪಸ್ಥಿತರಿದ್ದರು.