ಕಲ್ಯಾಣಪುರ : ಗುರು ಪೂರ್ಣಿಮಾ ಪ್ರಯುಕ್ತ ರೋಟರಿ ಕ್ಲಬ್ ವತಿಯಿಂದ ರಾಜೀವ್ ತೋನ್ಸೆಗೆ ಸನ್ಮಾನ
Posted On:
30-07-2021 12:14PM
ಉಡುಪಿ : ಗುರು ಪೂರ್ಣಿಮಾ ಪ್ರಯುಕ್ತ ಕಲ್ಯಾಣಪುರದ ರೋಟರಿ ಕ್ಲಬ್ ವತಿಯಿಂದ ನಾಡಿನ ಪ್ರಸಿದ್ಧ ಯಕ್ಷಗಾನ ವೇಷಧಾರಿ , ಹಿಮ್ಮೇಳ ವಾದಕ, ಯಕ್ಷಗುರು ಆಗಿರುವ ರಾಜೀವ್ ತೋನ್ಸೆ ಅವರಿಗೆ ಅಭಿನಂದನಾ ಪತ್ರ ಹಾಗೂ ಸನ್ಮಾನಿಸಲಾಯಿತು.
ಈ ಸಂದರ್ಭ ರೋಟರಿ ಅಧ್ಯಕ್ಷ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ರಾಮಕೃಷ್ಣ ಆಚಾರ ಅತಿಥಿಯನ್ನು ಪರಿಚಯಿಸಿದರು. ರೀನಾ ಆನಂದ ಶೆಟ್ಟಿ ಗುರು ಪೌರ್ಣಮಿಯ ಮಹತ್ವವನ್ನು ತಿಳಿಸಿದರು. ಗಿರೀಶ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.